ADVERTISEMENT

ಆನ್‌ಲೈನ್‌ ಮಾರಾಟಕ್ಕೆ ಹೀರೊ ಇ–ಶಾಪ್‌

ಪಿಟಿಐ
Published 8 ಜೂನ್ 2020, 16:17 IST
Last Updated 8 ಜೂನ್ 2020, 16:17 IST
hero
hero   

ನವದೆಹಲಿ: ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹೀರೊ ಮೊಟೊ ಕಾರ್ಪ್‌ ಕಂಪನಿಯು ಆನ್‌ಲೈನ್‌ ಮಾರಾಟಕ್ಕಾಗಿ ಇ–ಶಾಪ್‌ (eSHOP) ಆರಂಭಿಸಿದೆ.

ದ್ವಿಚಕ್ರ ವಾಹನಗಳ ಖರೀದಿ ಪ್ರಕ್ರಿಯೆಯುಸಂಪೂರ್ಣವಾಗಿ ಡಿಜಿಟಲ್‌ ಮೂಲಕವೇ ನಡೆಯಲಿದೆ. ಕಂಪನಿಯ ಜಾಲತಾಣದ ಮೂಲಕವೇ ಗ್ರಾಹಕರು ಮೋಟರ್‌ಸೈಕಲ್‌ ಅಥವಾ ಸ್ಕೂಟರ್‌ಗಳನ್ನು ನೇರವಾಗಿ ಖರೀದಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಖರೀದಿ, ವಿತರಣೆ, ಆನ್‌ ರೋಡ್‌ ಪ್ರೈಸ್‌, ವಾಹನದ ಲಭ್ಯತೆ, ದಾಖಲೆ ಪತ್ರಗಳ ಸಲ್ಲಿಕೆ, ತಕ್ಷಣದಲ್ಲೇ ಡೀಲರ್ಸ್‌ ಮಾಹಿತಿ ಹೀಗೆ ಪ್ರತಿಯೊಂದೂ ಮಾಹಿತಿಯು ಆನ್‌ಲೈನ್‌ನಲ್ಲಿಯೇ ಸಿಗಲಿವೆ.

ADVERTISEMENT

ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾರಾಟದ ನಂತರ ಸೇವೆಗಳನ್ನೂ ಡಿಜಿಟಲ್‌ ರೂಪದಲ್ಲಿಯೇ ನೀಡುವ ವ್ಯವಸ್ಥೆಯನ್ನುಹೀರೊ ಆ್ಯಪ್‌ನಲ್ಲಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.