ADVERTISEMENT

ಹೋಂಡಾದ ಹೊಸ ಜಾಝ್: ಒನ್‌–ಟಚ್ ಸನ್‌ರೂಫ್, ಅತ್ಯಾಧುನಿಕ ತಂತ್ರಜ್ಞಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಆಗಸ್ಟ್ 2020, 15:44 IST
Last Updated 14 ಆಗಸ್ಟ್ 2020, 15:44 IST
ಹೊಸ ಮಾದರಿಯ ಜಾಝ್ ಕಾರು
ಹೊಸ ಮಾದರಿಯ ಜಾಝ್ ಕಾರು   

ನವದೆಹಲಿ: ದೇಶದಲ್ಲಿ ಪ್ರೀಮಿಯಂ ಕಾರುಗಳ ಪ್ರಮುಖ ತಯಾರಿಕಾ ಕಂಪೆನಿಗಳಲ್ಲಿ ಒಂದಾಗಿರುವ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (HCIL) ಹೊಸ ಮಾದರಿಯ ಜಾಝ್ ಕಾರುಗಳ ಪ್ರೀ-ಲಾಂಚ್ ಬುಕ್ಕಿಂಗ್‌ ತೆರೆದಿದೆ.

ಮರುವಿನ್ಯಾಸಗೊಂಡಿರುವ ನ್ಯೂ ಜಾಝ್ ಮನಮೋಹಕ ನೋಟ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಕಾರ್ಯಾಚರಣೆ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಗ್ರಾಹಕರಿಗೆ ವಿಶಿಷ್ಟ ಅನುಭವ ನೀಡಲು ಸಕಲ ರೀತಿಯಲ್ಲೂ ಸಜ್ಜಾಗಿದೆ. ತಾಂತ್ರಿಕವಾಗಿ ಹಲವು ಅಪ್‌ಗ್ರೇಡ್‌ಗಳನ್ನು ಮಾಡಲಾಗಿದೆ. ನ್ಯೂ ಜಾಝ್‌ನಲ್ಲಿ ಬಿಎಸ್‌–6ಗೆ ಅನುಗುಣವಾಗಿರುವ 1.2ಲೀಟರ್‌ ಐ–ವಿಟೆಕ್ ಪೆಟ್ರೋಲ್ ಇಂಜಿನ್ ಇದೆ ಹಾಗೂ ಮಾನ್ಯುವಲ್ ಮತ್ತು ಸಿವಿಟಿ ಎರಡೂ ಟ್ರಾನ್ಸ್‌ಮಿಷನ್‌ಗಳಲ್ಲಿ ಲಭ್ಯವಿದೆ. ಈ ಕಾರಿನಲ್ಲಿ ವಿಶ್ವ ದರ್ಜೆಯ ಅತ್ಯುತ್ತಮ ಸುರಕ್ಷಾ ವ್ಯವಸ್ಥೆ ಅಳವಡಿಸಿರುವುದಾಗಿ ಹೋಂಡಾ ಹೇಳಿದೆ.

ಒನ್‌–ಟಚ್‌ ಎಲೆಕ್ಟ್ರಿಕ್‌ ಸನ್‌ರೂಫ್, ವಿಶೇಷವಾದ ಹಾಗೂ ಸಾಕಷ್ಟು ಸ್ಥಳಾವಕಾಶವಿರುವ ಇಂಟೀರಿಯರ್‌, ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್ (ಇನ್‌ಲೈನ್ ಶೆಲ್), ಎಲ್‌ಇಡಿ ಫಾಗ್‌ ಲ್ಯಾಂಪ್‌, ಸಿಗ್ನೇಚರ್‌ ವಿಂಗ್ ಲೈಟ್ ಜೊತೆಗೆ ಅತ್ಯಾಧುನಿಕ ಎಲ್‌ಇಡಿ ಪ್ಯಾಕೇಜ್‌, ಪುಶ್ ಬಟನ್ ಸ್ಟಾರ್ಟ್ ಮತ್ತು ಸ್ಟಾಪ್ ವ್ಯವಸ್ಥೆಯಂತಹ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಮರು ವಿನ್ಯಾಸಗೊಳಿಸಿದ ಮುಂದಿನ ಹಾಗೂ ಹಿಂಬದಿಯ ಬಂಪರ್‌ಗಳೊಂದಿಗೆ ಹೊರ ವಿನ್ಯಾಸ ಗಮನ ಸೆಳೆಯುವಂತಿದೆ.

ADVERTISEMENT

ದೇಶದಾದ್ಯಂತ ಎಚ್‌ಸಿಐಎಲ್‌ ಡೀಲರ್‌ಶಿಪ್‌ಗಳಲ್ಲಿ ₹21,000 ಮುಂಗಡ ಮೊತ್ತವನ್ನು ಪಾವತಿಸಿ ಬುಕ್‌ ಮಾಡಬಹುದಾಗಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿರುವ ಹೋಂಡಾ ಫ್ರಮ್ ಹೋಮ್ ಪ್ಲಾಟ್‌ಫಾರ್ಮ್ ಮೂಲಕವೂ ಕನಿಷ್ಠ ₹5,000 ಪಾವತಿಸಿ ಕಾರು ಬುಕ್‌ ಮಾಡಬಹುದು. ಇದೇ ತಿಂಗಳ ಅಂತ್ಯದಲ್ಲಿ ಹೊಸ ಜಾಝ್‌ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.