ADVERTISEMENT

ಮಾರುಕಟ್ಟೆಗೆ ಹೊಸ ಹೋಂಡಾ ಸಿಟಿ

ಪಿಟಿಐ
Published 15 ಜುಲೈ 2020, 11:18 IST
Last Updated 15 ಜುಲೈ 2020, 11:18 IST
ಹೊಸ ಹೋಂಡಾ ಸಿಟಿ
ಹೊಸ ಹೋಂಡಾ ಸಿಟಿ   

ನವದೆಹಲಿ: ಹೋಂಡಾ ಕಂಪನಿಯು ದೇಶದ ಮಾರುಕಟ್ಟೆಗೆ ಮಧ್ಯಮ ಗಾತ್ರದ ಸೆಡಾನ್‌ ಹೊಸ ಹೋಂಡಾ ಸಿಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.

ಜನಪ್ರಿಯ ಮಾದರಿಯ 5ನೇ ಪೀಳಿಗೆ ಇದಾಗಿದ್ದು, 4ನೇ ಪೀಳಿಗೆಗಿಂತಲೂ ಹೆಚ್ಚು ಉದ್ದ ಮತ್ತು ಅಗಲವಾಗಿದೆ. ವಾಯುಮಾಲಿನ್ಯ ನಿಯಂತ್ರಣ ಮಾನದಂಡ ಬಿಎಸ್‌6ನ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಆಯ್ಕೆಗಳಲ್ಲಿದೆ ಎಂದು ಕಂಪನಿ ಹೇಳಿದೆ

ಮ್ಯಾನುಯಲ್‌ ಟ್ರಾನ್ಸ್‌ಮಿಷನ್‌ನ 1.5 ಲೀಟರ್‌ ಪೆಟ್ರೋಲ್‌ ಎಂಜಿನ್‌ ಅವತರಣಿಕೆಯು ಬೆಲೆ ₹ 10.9 ಲಕ್ಷದಿಂದ 4 13.5 ಲಕ್ಷದವರೆಗಿದೆ. 1.5 ಲೀಟರ್‌ ಡೀಸೆಲ್‌ ಟ್ರಿಮ್‌ ಬೆಲೆ ₹ 12.40 ಲಕ್ಷದಿಂದ ₹ 14.65 ಲಕ್ಷದವರೆಗಿದೆ (ದೆಹಲಿ ಎಕ್ಸ್‌ಷೋರಂ ಬೆಲೆ).

ADVERTISEMENT

ಈ ಅವತರಣಿಕೆಯು ಹುಂಡೈ ವರ್ನಾ, ಮಾರುತಿ ಸುಜುಕಿ ಸಿಯಾಜ್‌ ಮತ್ತು ಸ್ಕೋಡಾ ರ್‍ಯಾಪಿಡ್‌ನೊಂದಿಗೆ ಪೈಪೋಟಿ ನೀಡಲಿದೆ. ಇದರಲ್ಲಿ ಅಲೆಕ್ಸಾ ಸೇರಿದಂತೆ ಹಲವು ಸ್ಮಾರ್ಟ್‌ ಸಾಧನಗಳ ಸಂಪರ್ಕ ವ್ಯವಸ್ಥೆ ಇದೆ. ಎಲ್ಲಾ ಮಾದರಿಗಳಲ್ಲಿ ಇರುವಂತೆಯೇ 32 ಕನೆಕ್ಟೆಡ್‌ ಫೀಚರ್‌ಗಳಿದ್ದು, ಐದು ವರ್ಷಗಳವರೆಗೆ ಉಚಿತ ಚಂದಾದಾರಿಕೆ ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ. ಹೊಸ ಅವತರಣಿಕೆಯ ಜತೆಗೆ ಬಿಎಸ್‌6ನ ನಾಲ್ಕನೇ ಪೀಳಿಗೆಯ ಹೋಂಡಾ ಸಿಟಿಯ ಮಾರಾಟವನ್ನೂ ಮುಂದುವರಿಸುವುದಾಗಿ ಹೇಳಿದೆ.

ಹೊಸ ಸಿಟಿಯು ಕಂಪನಿಯ ಮೌಲ್ಯವನ್ನು ಇನ್ನಷ್ಟು ವೃದ್ಧಿಸುವ ವಿಶ್ವಾಸವಿದೆ ಎಂದು ಕಂಪನಿಯ ಅಧ್ಯಕ್ಷ ಗಾಕು ನಕನಿಶಿ ಹೇಳಿದ್ದಾರೆ.

ಹೋಂಡಾ ಸಿಟಿಯ ಪ್ರತಿ ಪೀಳಿಗೆಯೂ ವಿನ್ಯಾಸ, ತಂತ್ರಜ್ಞಾನ, ಗುಣಮಟ್ಟ, ಚಾಲನಾ ಅನುಭವ, ಆರಾಮ, ಸುರಕ್ಷತೆ ಹಾಗೂ ಕೆಲವು ಉದ್ಯಮದಲ್ಲೇ ಮೊದಲ ವೈಶಿಷ್ಟ್ಯಗಳನ್ನು ಒಳಗೊಂಡು ಮೇಲ್ದರ್ಜೆಗೇರುತ್ತಲೇ ಇದೆ ಎಂದು ತಿಳಿಸಿದ್ದಾರೆ.

ವೈಶಿಷ್ಟ್ಯ

ಸ್ಮಾರ್ಟ್‌ಫೋನ್‌ ಸಂಪರ್ಕಿತ 20.3 ಇಂಚಿನ ಟಚ್‌ಸ್ಕ್ರೀನ್‌ ಡಿಸ್‌ಪ್ಲೇ ಆಡಿಯೊ ಸಿಸ್ಟಂ

ಸನ್‌ರೂಫ್‌

6 ಏರ್‌ಬ್ಯಾಗ್‌

ಮಲ್ಟಿ ಅ್ಯಂಗಲ್‌ ರೇರ್‌ ಕ್ಯಾಮೆರಾ

ಟೈರ್‌ ಪ್ರಶರ್‌ ಮಾನಿಟರಿಂಗ್‌ ಸಿಸ್ಟಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.