ADVERTISEMENT

ಜಿಮ್ನಿ ರಫ್ತು ಆರಂಭಿಸಿದ ಮಾರುತಿ ಸುಜುಕಿ

ಪಿಟಿಐ
Published 20 ಜನವರಿ 2021, 13:58 IST
Last Updated 20 ಜನವರಿ 2021, 13:58 IST
ಜಿಮ್ನಿ ಕಾಂಪ್ಯಾಕ್ಟ್ ಎಸ್‌ಯುವಿ
ಜಿಮ್ನಿ ಕಾಂಪ್ಯಾಕ್ಟ್ ಎಸ್‌ಯುವಿ   

‌ನವದೆಹಲಿ: ಜಿಮ್ನಿ ಕಾಂಪ್ಯಾಕ್ಟ್ ಎಸ್‌ಯುವಿ ವಾಹನಗಳ ರಫ್ತನ್ನು ಭಾರತದಿಂದ ಆರಂಭಿಸಲಾಗಿದೆ ಎಂದು ಮಾರುತಿ ಸುಜುಕಿ ಹೇಳಿದೆ. ಗುಜರಾತಿನ ಮುಂದ್ರಾ ಪೋರ್ಟ್‌ನಿಂದ 184 ವಾಹನಗಳು ಲ್ಯಾಟಿನ್‌ ಅಮೆರಿಕದ ಕೊಲಂಬಿಯಾ ಮತ್ತು ಪೆರು ದೇಶಗಳಿಗೆ ರವಾನೆಯಾಗುತ್ತಿವೆ. ಅಲ್ಲದೆ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಮಾರುಕಟ್ಟೆಗಳಿಗೂ ರಫ್ತು ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

ಭಾರತವನ್ನು ಜಿಮ್ನಿ ಮಾದರಿ ವಾಹನಗಳ ಜಾಗತಿಕ ತಯಾರಿಕಾ ಕೇಂದ್ರವನ್ನಾಗಿ ಮಾಡುವ ಉದ್ದೇಶವನ್ನು ಮಾರುತಿ ಸುಜುಕಿ ಕಂಪನಿಯ ಮಾತೃಸಂಸ್ಥೆಯಾದ ಸುಜುಕಿ ಮೋಟರ್ ಕಾರ್ಪೊರೇಷನ್‌ ಹೊಂದಿದೆ.

ಗ್ರೇಟರ್‌ ನೊಯಿಡಾದಲ್ಲಿ 2020ರಲ್ಲಿ ನಡೆದ ವಾಹನ ಪ್ರದರ್ಶನ ಮೇಳದಲ್ಲಿ ಇದನ್ನು ಪ್ರದರ್ಶಿಸಲಾಗಿತ್ತು. 1.5 ಲೀಟರ್‌ ಸಾಮರ್ಥ್ಯದ ಪೆಟ್ರೋಲ್‌ ಎಂಜಿನ್‌ ಹೊಂದಿದ್ದು, 5 ಸ್ಪೀಡ್‌ ಮ್ಯಾನುಯಲ್‌ ಟ್ರಾನ್ಸ್‌ಮಿಷನ್‌ ಮತ್ತು 4 ಸ್ಪೀಡ್‌ ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಆಯ್ಕೆಗಳನ್ನು ಹೊಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.