ADVERTISEMENT

ಮರ್ಸಿಡಿಸ್‌ ಬೆಂಜ್‌ ಎಎಂಜಿ ಜಿಎಲ್‌ಇ 63 ಎಸ್‌ 4ಮ್ಯಾಟಿಕ್‌+ ಕೂಪೆ ಬಿಡುಗಡೆ

ಪಿಟಿಐ
Published 23 ಆಗಸ್ಟ್ 2021, 22:30 IST
Last Updated 23 ಆಗಸ್ಟ್ 2021, 22:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಮರ್ಸಿಡಿಸ್‌ ಬೆಂಜ್‌ ಕಂಪನಿಯು ಹೊಸ ಎಎಂಜಿ ಜಿಎಲ್‌ಇ 63ಎಸ್ 4ಮ್ಯಾಟಿಕ್‌+ ಕೂಪೆ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 2.07 ಕೋಟಿ.

ಈ ಮಾದರಿಯು 4 ಲೀಟರ್‌ ಎಂಜಿನ್‌ ಹೊಂದಿದ್ದು, 612 ಹಾರ್ಸ್‌ ಪವರ್‌ ಸಾಮರ್ಥ್ಯ ಹೊಂದಿದೆ. ಎಎಂಜಿಯಲ್ಲಿ ಭಾರತದಲ್ಲಿ ಲಭ್ಯವಿರುವ ಕಂಪನಿಯ 12ನೇ ಮಾದರಿ ಇದಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

‘ಎಂಎಂಜಿ ಮಾದರಿಯು ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿದ್ದು, ಎಂಎಂಜಿ ಜಿಎಲ್‌ಇ 63 ಎಸ್‌ 4ಮ್ಯಾಟಿಕ್‌+ ಕೂಪೆ ನಮ್ಮ ಐಷಾರಾಮಿ ವಿಭಾಗವನ್ನು ಇನ್ನಷ್ಟು ಬಲಪಡಿಸಲಿದೆ’ ಎಂದು ಕಂಪನಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಮಾರ್ಟಿನ್‌ ಶ್ವೆಂಕ್‌ ಹೇಳಿದ್ದಾರೆ.

ADVERTISEMENT

ಏರ್‌ಬ್ಯಾಗ್, ಬ್ಲೈಂಡ್‌ ಸ್ಪಾಟ್‌ ಅಸಿಸ್ಟ್‌, ಆ್ಯಕ್ಟಿವ್‌ ಬ್ರೇಕ್‌ ಅಸಿಸ್ಟ್‌, ಡೈನಮಿಕ್‌ ಹ್ಯಾಂಡ್ಲಿಂಗ್‌ ಕಂಟ್ರೋಲ್‌ ಸಿಸ್ಟಂ ಸೇರಿದಂತೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.