ADVERTISEMENT

ಮರ್ಸಿಡಿಸ್‌ ಬೆಂಜ್‌ನ ಹೊಸ ‘ಎಸ್–ಕ್ಲಾಸ್‌’ ಬಿಡುಗಡೆ: ಆರಂಭಿಕ ಬೆಲೆ ₹ 2.17 ಕೋಟಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 8:48 IST
Last Updated 18 ಜೂನ್ 2021, 8:48 IST
ಮರ್ಸಿಡಿಸ್‌ ಬೆಂಜ್‌ ಎಸ್‌–ಕ್ಲಾಸ್
ಮರ್ಸಿಡಿಸ್‌ ಬೆಂಜ್‌ ಎಸ್‌–ಕ್ಲಾಸ್   

ನವದೆಹಲಿ: ಐಷಾರಾಮಿ ಕಾರು ತಯಾರಿಸುವ ಜರ್ಮನಿಯ ಮರ್ಸಿಡಿಸ್‌ ಬೆಂಜ್‌ ಕಂಪನಿಯು ಹೊಸ ಎಸ್‌–ಕ್ಲಾಸ್‌ ಸೆಡಾನ್‌ ಬಿಡುಗಡೆ ಮಾಡಿದೆ. ಇದರ ಬೆಲೆ ₹ 2.17 ಕೋಟಿಯಿಂದ ಆರಂಭವಾಗಲಿದೆ.

ಏಳನೇ ಪೀಳಿಗೆಯ ಈ ಸೆಡಾನ್‌ ಡೀಸೆಲ್‌ ಎಸ್‌400ಡಿ 4 ಮ್ಯಾಟಿಕ್‌ ಮತ್ತು ಪೆಟ್ರೋಲ್‌ ಎಸ್‌450 4ಮ್ಯಾಟಿಕ್‌ ಆವೃತ್ತಿಗಳಲ್ಲಿ ಲಭ್ಯವಿದೆ.

ಮೊದಲ ಹಂತದಲ್ಲಿ 150 ಕಾರುಗಳನ್ನು ಮಾತ್ರವೇ ಮಾರಾಟ ಮಾಡಲು ಆಲೋಚಿಸಲಾಗಿದೆ. ಶೇಕಡ 50ರಷ್ಟು ಕಾರುಗಳ ಬುಕಿಂಗ್ ಈಗಾಗಲೇ ಆಗಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಾರ್ಟಿನ್‌ ಶ್ವೆಂಕ್‌ ತಿಳಿಸಿದ್ದಾರೆ.

ADVERTISEMENT

ಕಂಪನಿಯು 2021ರಲ್ಲಿ ಒಟ್ಟಾರೆ 15 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದು, ಇಲ್ಲಿಯವರೆಗೆ ಒಟ್ಟಾರೆ 8 ವಾಹನಗಳನ್ನು ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.