ADVERTISEMENT

ಟೊಯೋಟಾ ಅರ್ಬನ್‌ ಕ್ರೂಸರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 14:19 IST
Last Updated 23 ಸೆಪ್ಟೆಂಬರ್ 2020, 14:19 IST
ಟಿಕೆಎಂ ವ್ಯವಸ್ಥಾಪಕ ನಿರ್ದೇಶಕ ಮಸಕಾಜು ಯೋಶಿಮುರಾ, ಮಾರಾಟ ಮತ್ತು ಸೇವೆಯ ಹಿರಿಯ ಉಪಾಧ್ಯಕ್ಷ ನವೀನ್ ಸೋನಿ ಮತ್ತು ಮಾರಾಟ ಮತ್ತು ಮಾರುಕಟ್ಟೆ ಉಪಾಧ್ಯಕ್ಷ ತಡಶಿ ಅಸಜುಮಾ ಅವರು ಕಾಂಪ್ಯಾಕ್ಟ್ ಎಸ್‌ಯುವಿ ಅರ್ಬನ್‌ ಕ್ರೂಸರ್‌ ಬಿಡುಗಡೆ ಮಾಡಿದರು
ಟಿಕೆಎಂ ವ್ಯವಸ್ಥಾಪಕ ನಿರ್ದೇಶಕ ಮಸಕಾಜು ಯೋಶಿಮುರಾ, ಮಾರಾಟ ಮತ್ತು ಸೇವೆಯ ಹಿರಿಯ ಉಪಾಧ್ಯಕ್ಷ ನವೀನ್ ಸೋನಿ ಮತ್ತು ಮಾರಾಟ ಮತ್ತು ಮಾರುಕಟ್ಟೆ ಉಪಾಧ್ಯಕ್ಷ ತಡಶಿ ಅಸಜುಮಾ ಅವರು ಕಾಂಪ್ಯಾಕ್ಟ್ ಎಸ್‌ಯುವಿ ಅರ್ಬನ್‌ ಕ್ರೂಸರ್‌ ಬಿಡುಗಡೆ ಮಾಡಿದರು   

ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್ ಮೋಟರ್‌ (ಟಿಕೆಎಂ) ಕಂಪನಿಯು ದೇಶದ ಮಾರುಕಟ್ಟೆಗೆ ಸಣ್ಣ ಎಸ್‌ಯುವಿ ಟೊಯೋಟಾ ಅರ್ಬನ್ ಕ್ರೂಸರ್ ಬಿಡುಗಡೆ ಮಾಡಿದೆ. ಅಕ್ಟೋಬರ್‌ ತಿಂಗಳ ಮಧ್ಯಭಾಗದಿಂದ ವಿತರಣೆ ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ. ಎಕ್ಸ್ ಷೋರೂಂ ಬೆಲೆ ₹ 8.40 ಲಕ್ಷದಿಂದ ₹ 11.30 ಲಕ್ಷದವರೆಗಿದೆ.

ಸಣ್ಣ ಎಸ್‌ಯುವಿ ವಿಭಾಗದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳಲು ಮತ್ತು ಯುವ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಇದನ್ನು ಬಿಡುಗಡೆ ಮಾಡಲಾಗಿದೆ. ಟೊಯೋಟಾ-ಸುಜುಕಿ ಮೈತ್ರಿಯಡಿಯಲ್ಲಿ ಭಾರತದಲ್ಲಿ ಬಿಡುಗಡೆಯಾದ ಎರಡನೇ ಮಾದರಿ ಇದು. ಇದಕ್ಕೂ ಮೊದಲು ಗ್ಲಾನ್ಸಾ ಬಿಡುಗಡೆ ಮಾಡಲಾಗಿದೆ.

ಹೊಚ್ಚಹೊಸ ಅರ್ಬನ್ ಕ್ರೂಸರ್ ಕೆ-ಸಿರೀಸ್ 1.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಮ್ಯಾನುಯಲ್ ಟ್ರಾನ್ಸ್‌ಮಿಷನ್‌ (ಎಂಟಿ) ಮತ್ತು ಸ್ವಯಂಚಾಲಿತ ಟ್ರಾನ್ಸ್‌ಮಿಷನ್‌ (ಎ.ಟಿ) ಆಯ್ಕೆಯಲ್ಲಿ ಲಭ್ಯವಿದೆ.

ADVERTISEMENT

‘ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವನ್ನು ನಾವು ಪ್ರವೇಶಿಸಿದ್ದೇವೆ. ಟೊಯೋಟಾ ಕುಟುಂಬಕ್ಕೆ ಹೆಚ್ಚಿನ ಗ್ರಾಹಕರನ್ನು, ವಿಶೇಷವಾಗಿ ಯುವಕರನ್ನು ಸ್ವಾಗತಿಸುವ ಹಾದಿಯಲ್ಲಿ ಇದು ಪ್ರಮುಖ ಹೆಜ್ಜೆ. ಉತ್ತಮವಾದ ಕಾರುಗಳು, ಉತ್ತಮ ತಂತ್ರಜ್ಞಾನ, ಪರಿಸರ ಸ್ನೇಹಿ ಉತ್ಪನ್ನಗಳು ಮತ್ತು ಸೇವೆಗಳನ್ನು ಪರಿಚಯಿಸಲು ನಾವು ಯಾವತ್ತೂ ಒತ್ತು ನೀಡುತ್ತೇವೆ’ ಎಂದು ಟಿಕೆಎಂ ವ್ಯವಸ್ಥಾಪಕ ನಿರ್ದೇಶಕ ಮಸಕಾಜು ಯೋಶಿಮುರಾ ತಿಳಿಸಿದರು.

‘ಬಿಡುಗಡೆಗೂ ಮೊದಲೇ ಕಾಯ್ದಿರಿಸಿದ ಗ್ರಾಹಕರಿಗೆ ‘ರೆಸ್ಪೆಕ್ಟ್ ಪ್ಯಾಕೇಜ್’ ಘೋಷಿಸಿದ್ದೇವೆ, ಎರಡು ವರ್ಷಗಳವರೆಗೆ ಯಾವುದೇ ವೆಚ್ಚವಿಲ್ಲದ ನಿರ್ವಹಣೆ (ಅಥವಾ 20,000 ಕಿಲೋಮೀಟರ್‌ವರೆಗೆ) ಸೌಲಭ್ಯ ನೀಡಲಾಗುವುದು ಎಂದು ಟಿಕೆಎಂನ ಮಾರಾಟ ಮತ್ತು ಸೇವೆಯ ಹಿರಿಯ ಉಪಾಧ್ಯಕ್ಷ ನವೀನ್ ಸೋನಿ ಮಾಹಿತಿ ನೀಡಿದರು.

www.toyotabharat.com ಅಥವಾ ಹತ್ತಿರದ ಟೊಯೋಟಾ ಮಾರಾಟಗಾರರನ್ನು ಭೇಟಿ ಮಾಡಿ ಅರ್ಬನ್‌ ಕ್ರೂಸರ್‌ ಕಾಯ್ದಿರಿಸಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

ವೈಶಿಷ್ಟ್ಯ

* ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌

* ಎಬಿಎಸ್ ಮತ್ತು ಇಬಿಡಿ

* ಹಿಲ್ ಹೋಲ್ಡ್ ಕಂಟ್ರೋಲ್

* ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.