ADVERTISEMENT

TVS Raider 125: ನೂತನ ಬೈಕ್ ಬಿಡುಗಡೆ ಮಾಡಿದ ಟಿವಿಎಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಸೆಪ್ಟೆಂಬರ್ 2021, 10:19 IST
Last Updated 16 ಸೆಪ್ಟೆಂಬರ್ 2021, 10:19 IST
ಟಿವಿಎಸ್ ರೈಡರ್ 125
ಟಿವಿಎಸ್ ರೈಡರ್ 125   

ಬೆಂಗಳೂರು: ಟಿವಿಎಸ್ ಮೋಟಾರ್ ಕಂಪನಿ ದೇಶದ ಮಾರುಕಟ್ಟೆಗೆ ಹೊಸ ಬೈಕ್ ಪರಿಚಯಿಸಿದೆ. ಟಿವಿಎಸ್ ‘ರೈಡರ್ 125’ ಆಕರ್ಷಕ ಸ್ಪೋರ್ಟ್ಸ್ ಬೈಕ್ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ.

ಯುವಜನತೆಯನ್ನು ಗಮನದಲ್ಲಿರಿಸಿಕೊಂಡು ಹೊಸ ಬೈಕ್ ಬಿಡುಗಡೆ ಮಾಡಿರುವುದಾಗಿ ಟಿವಿಎಸ್ ಹೇಳಿದೆ.

ಹೊಸ ವಿನ್ಯಾಸದ ಆಕರ್ಷಕ ಎಲ್‌ಇಡಿ ಹೆಡ್‌ಲ್ಯಾಂಪ್, ಹಿಂಭಾಗದ ಎಲ್‌ಇಡಿ ಬಲ್ಬ್, ಟಿಎಫ್‌ಟಿ ಸ್ಕ್ರೀನ್ ಇದರಲ್ಲಿದೆ.

ADVERTISEMENT

ಡ್ರಮ್, ಡಿಸ್ಕ್ ಬ್ರೇಕ್ ಮತ್ತ ಟಿಎಫ್‌ಟಿ ಸ್ಕ್ರೀನ್ ಸಹಿತ ಎಂಬ ಮೂರು ಆವೃತ್ತಿಗಳಲ್ಲಿ ಹೊಸ ಟಿವಿಎಸ್ ರೈಡರ್ ಲಭ್ಯವಾಗಲಿದ್ದು, ಹಳದಿ, ಕೆಂಪು ಮತ್ತು ಕಪ್ಪು ಎಂಬ ಮೂರು ಬಣ್ಣಗಳ ಆಯ್ಕೆಯಿದೆ.

ಇಕೊ ಮತ್ತು ಪವರ್ ಮೋಡ್, 5 ಸ್ಪೀಡ್ ಗಿಯರ್‌ಬಾಕ್ಸ್ ನೂತನ ಟಿವಿಎಸ್ ರೈಡರ್ 125 ಬೈಕ್‌ನಲ್ಲಿದೆ.

ದೇಶದಲ್ಲಿ ಟಿವಿಎಸ್ ರೈಡರ್ 125 ಬೈಕ್ ಬೆಲೆ ₹77,500 (ಎಕ್ಸ್‌. ಶೋ ರೂಂ.) ದಿಂದ ಆರಂಭವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.