ADVERTISEMENT

ಟಿವಿಎಸ್ ಐಕ್ಯೂಬ್‌ ಸರಣಿಯ ಸ್ಕೂಟರ್ ಅನಾವರಣ

​ಪ್ರಜಾವಾಣಿ ವಾರ್ತೆ
Published 18 ಮೇ 2022, 15:52 IST
Last Updated 18 ಮೇ 2022, 15:52 IST
ಟಿವಿಎಸ್ ಐಕ್ಯೂಬ್‌ ಎಸ್‌ಟಿ
ಟಿವಿಎಸ್ ಐಕ್ಯೂಬ್‌ ಎಸ್‌ಟಿ   

ಬೆಂಗಳೂರು: ಟಿವಿಎಸ್ ಮೋಟರ್ ಕಂಪನಿಯು ಐಕ್ಯೂಬ್‌ ಸರಣಿಯ ಹೊಸ ವಿದ್ಯುತ್ ಚಾಲಿತ (ಇ.ವಿ) ಸ್ಕೂಟರ್‌ಗಳನ್ನು ಬುಧವಾರ ಅನಾವರಣ ಮಾಡಿದೆ. ಮೂರು ಮಾದರಿಗಳಲ್ಲಿ ಈ ಸ್ಕೂಟರ್ ಲಭ್ಯವಾಗಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಗರಿಷ್ಠ 140 ಕಿ.ಮೀ. ಪ್ರಯಾಣಿಸಲು ಸಾದ್ಯವಾಗುತ್ತದೆ ಎಂದು ಕಂಪನಿ ಹೇಳಿದೆ.

ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ, ಕೊಂಡೊಯ್ಯಬಹುದಾದ ಚಾರ್ಜರ್, 32 ಲೀಟರ್ ಸಾಮರ್ಥ್ಯದ ಸ್ಟೋರೇಜ್ ಜಾಗವನ್ನು ಇದು ಹೊಂದಿದೆ.

‘ಟಿವಿಎಸ್ ಕಂಪನಿಯು ಇ.ವಿ. ತಂತ್ರಜ್ಞಾನದಲ್ಲಿ ಹತ್ತು ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಹೂಡಿಕೆ ಮಾಡುತ್ತಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು ಹೇಳಿದ್ದಾರೆ.

ADVERTISEMENT

ಐಕ್ಯೂಬ್‌ ಎಸ್‌ಟಿ ಒಂದು ಬಾರಿ ಚಾರ್ಜ್‌ ಮಾಡಿದರೆ 140 ಕಿ.ಮೀ. ಸಾಗುತ್ತದೆ. ಐಕ್ಯೂಬ್‌ ಎಸ್‌ ಹಾಗೂ ಐಕ್ಯೂಬ್ 100 ಕಿ.ಮೀ ಸಾಗುತ್ತವೆ.

ಐಕ್ಯೂಬ್‌ ಮತ್ತು ಐಕ್ಯೂಬ್‌ ಎಸ್‌ ಮಾದರಿಗಳ ಆನ್‌ರೋಡ್ ಬೆಲೆಯು ₹ 98,564 ಹಾಗೂ ₹ 1.08 ಲಕ್ಷ (ದೆಹಲಿಯಲ್ಲಿ). ಈ ಎರಡು ಮಾದರಿಗಳ ಬುಕಿಂಗ್ ಆರಂಭವಾಗಿದೆ ಎಂದು ಕಂಪನಿ ಹೇಳಿದೆ. ಐಕ್ಯೂಬ್ ಎಸ್‌ಟಿ ಬೆಲೆಯನ್ನು ಕಂಪನಿ ತಿಳಿಸಿಲ್ಲ. ಇದರ ಪ್ರೀಬುಕಿಂಗ್ ಶುರುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.