ADVERTISEMENT

ಮೊದಲ ತ್ರೈಮಾಸಿಕದಲ್ಲಿ ವಾಹನಗಳ ರಫ್ತು ಹೆಚ್ಚಳ

ಪಿಟಿಐ
Published 18 ಜುಲೈ 2021, 15:55 IST
Last Updated 18 ಜುಲೈ 2021, 15:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಭಾರತದಿಂದ ರಫ್ತು ಆಗಿರುವ ವಾಹನಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

ಭಾರತೀಯ ವಾಹನ ತಯಾರಕರ ಒಕ್ಕೂಟದ (ಎಸ್‌ಐಎಎಂ) ಪ್ರಕಾರ, 2020–21ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 4.36 ಲಕ್ಷ ವಾಹನಗಳು ರಫ್ತಾಗಿದ್ದವು. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 14.19 ಲಕ್ಷ ವಾಹನಗಳು ರಫ್ತಾಗಿವೆ.

ದ್ವಿಚಕ್ರ, ತ್ರಿಚಕ್ರ, ಪ್ರಯಾಣಿಕ ವಾಹನ ಹಾಗೂ ವಾಣಿಜ್ಯ ವಾಹನಗಳ ರಫ್ತು ಪ್ರಮಾಣವು ಹಿಂದಿನ ಮೂರು ವರ್ಷಗಳಿಗಿಂತ ಉತ್ತಮವಾಗಿದೆ. ಹೀಗಿದ್ದರೂ, 2018–19ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕಿಂತ ಕಡಿಮೆ ಇದೆ ಎಂದು ಒಕ್ಕೂಟದ ಪ್ರಧಾನ ನಿರ್ದೇಶಕ ರಾಜೇಶ್‌ ಮೆನನ್‌ ಹೇಳಿದ್ದಾರೆ.

ADVERTISEMENT

ಪ್ರಯಾಣಿಕ ವಾಹನಗಳ ರಫ್ತು 43,619ರಿಂದ 1.27 ಲಕ್ಷಕ್ಕೆ ಏರಿಕೆ ಆಗಿದೆ. ಪ್ರಯಾಣಿಕ ಕಾರು ರಫ್ತು 47,151ರಿಂದ 79,376ಕ್ಕೆ ಏರಿಕೆ ಕಂಡಿದೆ.

ಪ್ರಯಾಣಿಕ ವಾಹನಗಳ ರಫ್ತು ವಿಭಾಗದಲ್ಲಿ ಮಾರುತಿ ಸುಜುಕಿ ಇಂಡಿಯಾ ಕಂಪನಿ 45,056 ವಾಹನಗಳನ್ನು ರಫ್ತು ಮಾಡುವ ಮೂಲಕ ಮುಂಚೂಣಿಯಲ್ಲಿದೆ. ಹುಂಡೈ, ಕಿಯಾ ಮತ್ತು ಫೋಕ್ಸ್‌ವ್ಯಾಗನ್ ನಂತರದ ಸ್ಥಾನಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.