ADVERTISEMENT

ಬಿಎಂಡಬ್ಲ್ಯು ಕಾಂಪಿಟಿಷನ್‌ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 21:11 IST
Last Updated 27 ನವೆಂಬರ್ 2020, 21:11 IST
ಬಿಎಂಡಬ್ಲ್ಯು ಎಕ್ಸ್‌5 ಎಂ ಕಾಂಪಿಟಿಷನ್
ಬಿಎಂಡಬ್ಲ್ಯು ಎಕ್ಸ್‌5 ಎಂ ಕಾಂಪಿಟಿಷನ್   

ಬೆಂಗಳೂರು: ಬಿಎಂಡಬ್ಲ್ಯೂ ಇಂಡಿಯಾ ಕಂಪನಿಯು ‘ಎಕ್ಸ್‌5 ಎಂ ಕಾಂಪಿಟಿಷನ್’ ಮಾದರಿಯ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಈಗ ದೇಶದ ಎಲ್ಲ ಬಿಎಂಡಬ್ಲ್ಯೂ ಮಳಿಗೆಗಳಲ್ಲಿ ಸಿಗುತ್ತಿದೆ. ಇದರ ಎಕ್ಸ್‌ ಶೋರೂಂ ಬೆಲೆ ₹ 1.94 ಕೋಟಿ.

ಕಣ್ಸೆಳೆಯುವ ನೋಟ ಇದರ ವೈಶಿಷ್ಟ್ಯಗಳಲ್ಲಿ ಪ್ರಮುಖವಾದುದು ಎಂದು ಕಂಪನಿ ಹೇಳಿದೆ. ನೋಡಿದ ತಕ್ಷಣ ಎದ್ದುಕಾಣುವುದು ಕಾರಿನ ಮುಂದಿನ ಬಂಪರ್‌. ಒಳಾಂಗಣ ವಿನ್ಯಾಸವು ಐಷಾರಾಮಿ ಕಾರುಗಳಿಗೆ ಹೇಳಿ ಮಾಡಿಸಿದಂತೆ ಇದೆ. ಕಾರಿನಲ್ಲಿ 12.3 ಇಂಚು ಅಗಲವಾದ ಬಹು ಉಪಯೋಗಿ ಟಚ್‌ಸ್ಕ್ರೀನ್‌ ವ್ಯವಸ್ಥೆ ಇದೆ.

ವಾಸ್ತವೋಪಮ (virtual) ಸಹಾಯಕ ಈ ಕಾರಿನ ಜೊತೆ ಸೇವೆಗೆ ಸದಾ ಲಭ್ಯವಿರುತ್ತಾನೆ! ವೈರ್‌ಲೆಸ್‌ ಚಾರ್ಜಿಂಗ್‌ ಸೌಲಭ್ಯ ಹಾಗೂ ಹರ್ಮನ್‌ ಕಾರ್ಡನ್ ಸೌಂಡ್‌ ವ್ಯವಸ್ಥೆ ಇರಲಿದೆ. ಈ ಕಾರಿನ ಎಂಜಿನ್‌ ಗರಿಷ್ಠ 750 ಎನ್‌ಎಂ ಟಾರ್ಕ್‌ ನೀಡಬಲ್ಲದು. ಕೇವಲ 3.8 ಸೆಕೆಂಡ್‌ಗಳಲ್ಲಿ ಪ್ರತಿ ಗಂಟೆಗೆ 100 ಕಿ.ಮೀ ವೇಗವನ್ನು ತಲುಪಬಲ್ಲದು. ಕಾರು ಪ್ರತಿ ಗಂಟೆಗೆ ಗರಿಷ್ಠ 250 ಕಿ.ಮೀ. ವೇಗದಲ್ಲಿ ಸಾಗಬಲ್ಲದು ಎಂದು ಕಂಪನಿ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.