ADVERTISEMENT

ವಿದ್ಯುತ್ ಚಾಲಿತ ಕಾರು ಎಂಜಿನ್ ಅಭಿವೃದ್ಧಿಗೆ ಹೆಚ್ಚಿನ ಸಂಶೋಧನೆ: ಕಂಪನಿಗಳು

ಡೆಕ್ಕನ್ ಹೆರಾಲ್ಡ್
Published 10 ಮಾರ್ಚ್ 2021, 5:21 IST
Last Updated 10 ಮಾರ್ಚ್ 2021, 5:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾರು ತಯಾರಿಕ ಕಂಪನಿಗಳು ಸಂಶೋಧನೆ ಮತ್ತು ಅಭಿವೃದ್ಧಿಗೆ ವೆಚ್ಚ ಮಾಡುವ ಮೊತ್ತ ಎಷ್ಟೆಂದರೆ ಅವರು ಗಳಿಸುವ ಆದಾಯಕ್ಕಿಂತಲೂ ಹೆಚ್ಚು.. ಕಳೆದ ಹಲವು ದಶಕಗಳಿಂದಲೂ ಕಾರು ಎಂಜಿನ್ ಅಭಿವೃದ್ಧಿಪಡಿಸುವುದು ಮತ್ತು ಸಂಬಂಧಿತ ಸಂಶೋಧನೆಗೆ ಅತ್ಯಂತ ಹೆಚ್ಚಿನ ಮೊತ್ತವನ್ನು ವ್ಯಯಿಸಲಾಗಿದೆ ಎಂದು ಕಾರು ತಯಾರಿಕ ಕಂಪನಿಗಳು ಹೇಳಿಕೊಂಡಿವೆ.

ಪ್ರಸ್ತುತ ವಾಹನ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಹೆಚ್ಚಿನ ಸಂಶೋಧನೆ ಮತ್ತು ಅನ್ವೇಷಣೆ ನಡೆಯುತ್ತಿದೆ. ಅದರಲ್ಲೂ ಬ್ಯಾಟರಿ ತಂತ್ರಜ್ಞಾನದ ಬಗ್ಗೆ ತಂತ್ರಜ್ಞರು ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಭವಿಷ್ಯದ ತಾಂತ್ರಿಕತೆ ಮತ್ತು ಪೇಟೆಂಟ್ ಕುರಿತು ಕೂಡ ವಿವಿಧ ರೀತಿಯಲ್ಲಿ ವಾಹನ ಲೋಕದಲ್ಲಿ ಅಭಿವೃದ್ಧಿ ಮತ್ತು ಸಂಶೋಧನೆ ನಡೆಯುತ್ತಿದೆ ಎಂದು ವಾಹನ ಲೋಕದ ಪ್ರಮುಖ ಕಂಪನಿಗಳು ತಿಳಿಸಿವೆ.

ಟಾಟಾ ಮೋಟಾರ್ಸ್ ಲಿ. ಒಡೆತನದ ಜಾಗ್ವರ್ ಲ್ಯಾಂಡ್ ರೋವರ್ ಅಟೋಮೋಟಿವ್, ಯೋಜಿತ ಉತ್ಪಾದನೆ ಕೈಗೊಳ್ಳಲು ಸಾಧ್ಯವಾಗಿಲ್ಲ, ಜತೆಗೆ ಸಂಶೋಧನೆ ಅಭಿವೃದ್ಧಿಗೆ ಹೆಚ್ಚಿನ ಹಣ ವ್ಯಯಿಸಬೇಕಾಯಿತು ಎಂದು ಹೇಳಿದೆ.

ADVERTISEMENT

ಅಲ್ಲದೆ, ಅಸ್ಟೊನ್ ಮಾರ್ಟಿನ್ ಸಂಸ್ಥೆ ಕೂಡ ಭವಿಷ್ಯದ ತಂತ್ರಜ್ಞಾನ ಅಭಿವೃದ‌್ಧಿ ಕೆಲಸಗಳಿಗೆ ಮರ್ಸಿಡಿಸ್ ಬೆನ್ಜ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಹೆಚ್ಚಿನ ಮೊತ್ತವನ್ನು ಸಂಶೋಧನೆಗೆ ಬಳಸಿದ್ದೇವೆ ಎಂದು ಹೇಳಿದೆ.

ಅಷ್ಟು ಮಾತ್ರವಲ್ಲದೆ, ಟೊಯೊಟಾ ಮೋಟಾರ್ಸ್, ಜನರಲ್ ಮೋಟಾರ್ಸ್ ಮತ್ತು ಜರ್ಮನಿಯ ಪ್ರಸಿದ್ಧ ಕಾರು ತಯಾರಿಕ ಕಂಪನಿಗಳು ಕೂಡ ಗ್ರಾಹಕರ ಸಲುವಾಗಿ ಹೆಚ್ಚಿನ ಮೊತ್ತವನ್ನು ಅಭಿವೃದ್ಧಿ ಸಂಶೋಧನೆಗೆ ಬಳಸಿದ್ದೇವೆ ಎಂದು ಹೇಳಿವೆ. ಅಲ್ಲದೆ, ಆದಾಯಕ್ಕಿಂತ ಹೆಚ್ಚಿನ ಮೊತ್ತವನ್ನು ಸಂಶೋಧನೆಗೆ ವ್ಯಯಿಸಬೇಕಿದ್ದು, ಅಲ್ಲಿ ಕೆಲವೊಮ್ಮೆ ನಷ್ಟದ ಜತೆಗೆ, ಹೂಡಿಕೆಯೂ ವ್ಯರ್ಥವಾಗುತ್ತಿದೆ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.