ಮಹೀಂದ್ರ ಥಾರ್‌: ಆರು ತಿಂಗಳೊಳಗೆ 50 ಸಾವಿರ ದಾಟಿದ ಬುಕಿಂಗ್‌

ಪಿಟಿಐ Updated:

ಅಕ್ಷರ ಗಾತ್ರ : | |

ಥಾರ್‌

ನವದೆಹಲಿ: ‘ಥಾರ್‌’ ಎಸ್‌ಯುವಿ ಬಿಡುಗಡೆ ಆದ ಆರು ತಿಂಗಳೊಳಗೆ 50 ಸಾವಿರಕ್ಕೂ ಅಧಿಕ ಬುಕಿಂಗ್ ಆಗಿದೆ ಎಂದು ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿ ಸೋಮವಾರ ತಿಳಿಸಿದೆ.

‘ಹೊಸ ಥಾರ್‌ಗೆ ವ್ಯಕ್ತವಾಗಿರುವ ಅಭೂತಪೂರ್ವ ಸ್ಪಂದನೆಯು ಸಂತೋಷ ತಂದಿದೆ. ಇದು ನಮ್ಮೆಲ್ಲ ನಿರೀಕ್ಷೆಗಳನ್ನು ಮೀರಿಸಿದೆ’ ಎಂದು ಕಂಪನಿಯ ಆಟೊಮೊಟಿವ್‌ ವಿಭಾಗದ ಸಿಇಒ ವಿಜಯ್‌ ನಕ್ರಾ ತಿಳಿಸಿದ್ದಾರೆ.

ಈ ಮಾದರಿಗೆ ಕಾಯುವಿಕೆಯ ಅವಧಿಯು ನಿರೀಕ್ಷೆಗಿಂತಲೂ ದೀರ್ಘವಾಗಿದೆ ಎಂದು ಅವರು ಹೇಳಿದ್ದಾರೆ. ಈ ಸವಾಲಿನ ಸಂದರ್ಭದಲ್ಲಿ ತಯಾರಿಕೆಯನ್ನು ಹೆಚ್ಚಿಸಲು ನಾವು ನಮ್ಮ ಪೂರೈಕೆದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.