ADVERTISEMENT

ಮಾರುತಿಯ ಆಯ್ದ ಕಾರುಗಳ ಎಕ್ಸ್‌ ಷೊರೂಂ ಬೆಲೆ ₹ 5 ಸಾವಿರದವರೆಗೆ ಇಳಿಕೆ

ಪಿಟಿಐ
Published 25 ಸೆಪ್ಟೆಂಬರ್ 2019, 9:44 IST
Last Updated 25 ಸೆಪ್ಟೆಂಬರ್ 2019, 9:44 IST
   

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಬುಧವಾರದಿಂದಲೇ ಜಾರಿಗೆ ಬರುವಂತೆ ತನ್ನ ಕೆಲವು ಮಾದರಿಗಳ ಎಕ್ಸ್‌ ಷೋರೂಂ ಬೆಲೆಯಲ್ಲಿ ₹ 5 ಸಾವಿರದವರೆಗೂ ಇಳಿಕೆ ಮಾಡಿದೆ.

ಆಲ್ಟೊ 800, ಆಲ್ಟೊ ಕೆ10,ವಿತಾರಾ ಬ್ರೇಜಾ, ಎಸ್‌ ಕ್ರಾಸ್‌, ಇಗ್ನಿಸ್‌, ಡೀಸೆಲ್‌ ಎಂಜಿನ್‌ನ ಸ್ಪಿಫ್ಟ್‌, ಬಲೆನೊ, ಡಿಸೈರ್‌, ಟೂರ್‌ ಎಸ್‌ ಕಾರುಗಳ ಬೆಲೆಯಲ್ಲಿ ಇಳಿಕೆ ಮಾಡಿರುವುದಾಗಿ ತಿಳಿಸಿದೆ.

ಈ ಮಾದರಿಗಳ ಬೆಲೆ ₹ 2.93 ಲಕ್ಷದಿಂದ ₹ 11.49 ಲಕ್ಷದವರೆಗಿದೆ.

ಬೆಲೆಯಲ್ಲಿ ಇಳಿಕೆ ಮಾಡಿರುವುದರಿಂದ ಆರಂಭಿಕ ಹಂತದ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಅನುಕೂಲ ಆಗಲಿದೆ. ಹಬ್ಬದ ಸಂದರ್ಭದಲ್ಲಿ ಈ ನಿರ್ಧಾರ ಕೈಗೊಂಡಿರುವುದರಿಂದ ಬೇಡಿಕೆ ಸೃಷ್ಟಿಗೂ ನೆರವಾಗಲಿದೆ ಎಂದು ಹೇಳಿದೆ.

ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ದರವನ್ನು ಕಡಿತ ಮಾಡಿದ ಬಳಿಕ ವಾಹನಗಳ ಬೆಲೆ ಇಳಿಕೆ ನಿರ್ಧಾರ ಪ್ರಕಟಿಸಿರುವ ಮೊದಲ ಕಂಪನಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.