ADVERTISEMENT

ಮಾರುತಿ, ಹುಂಡೈ ಮಾರಾಟ ಇಳಿಕೆ: ಕಾರಣ ಏನು?

ಪಿಟಿಐ
Published 2 ಮೇ 2022, 9:59 IST
Last Updated 2 ಮೇ 2022, 9:59 IST
   

ನವದೆಹಲಿ: ಸೆಮಿಕಂಡಕ್ಟರ್‌ ಕೊರತೆ ಮತ್ತು ಪೂರೈಕೆ ವ್ಯವಸ್ಥೆಯಲ್ಲಿನ ಸವಾಲುಗಳಿಂದಾಗಿ ಏಪ್ರಿಲ್‌ನಲ್ಲಿ ಮಾರುತಿ ಮತ್ತು ಹುಂಡೈ ಕಂಪನಿಗಳ ವಾಹನ ಸಗಟು ಮಾರಾಟ ಇಳಿಕೆ ಕಂಡಿದೆ.

ಇನ್ನೊಂದೆಡೆ, ಟಾಟಾ ಮೋಟರ್ಸ್‌, ಟೊಯೋಟ, ಸ್ಕೋಡಾ ಆಟೊ ಕಂಪನಿಗಳ ಮಾರಾಟ ಹೆಚ್ಚಾಗಿದೆ.

ದೇಶದ ಪ್ರಮುಖ ಕಂಪನಿ ಮಾರುತಿ ಸುಜಕಿ ಇಂಡಿಯಾದ ಮಾರಾಟವು 2021ರ ಏಪ್ರಿಲ್‌ನಲ್ಲಿ 1.42 ಲಕ್ಷ ಇತ್ತು. 2022ರ ಏಪ್ರಿಲ್‌ನಲ್ಲಿ 1.32 ಲಕ್ಷಕ್ಕೆ ಶೇ 7ರಷ್ಟು ಇಳಿಕೆ ಆಗಿದೆ.

ADVERTISEMENT

ಹುಂಡೈ ಮೋಟರ್‌ ಇಂಡಿಯಾದ ಮಾರಾಟ 49,002 ರಿಂದ 44,001ಕ್ಕೆ ಶೇ 10ರಷ್ಟು ಇಳಿಕೆ ಆಗಿದೆ. ಹೋಂಡಾ ಕಾರ್ಸ್‌ ಇಂಡಿಯಾದ ಮಾರಾಟ ಶೇ 13ರಷ್ಟು ಇಳಿಕೆ ಆಗಿದೆ. ಅದೇ ರೀತಿ ‌ಎಂಜಿ ಮೋಟರ್‌ ಕಂಪನಿಯ ಮಾರಾಟ ಶೇ 22ರಷ್ಟು ಇಳಿಕೆ ಆಗಿದೆ.

ಟಾಟಾ ಮೋಟರ್ಸ್ ಕಂಪನಿಯ ಮಾರಾಟ ಶೇ 66ರಷ್ಟು ಹೆಚ್ಚಾಗಿದ್ದು 41,587ಕ್ಕೆ ಏರಿಕೆ ಆಗಿದೆ. ಟೊಯೋಟ ಕಿರ್ಲೋಸ್ಕರ್‌ ಕಂಪನಿಯ ಸಗಟು ಮಾರಾಟ ಶೇ 57ರಷ್ಟು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.