ADVERTISEMENT

ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಕಾರುಗಳ ಬೆಲೆ ಹೆಚ್ಚಳ: ಮಾರುತಿ

ಪಿಟಿಐ
Published 21 ಜೂನ್ 2021, 12:17 IST
Last Updated 21 ಜೂನ್ 2021, 12:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ತಯಾರಿಕಾ ವೆಚ್ಚ ಹೆಚ್ಚಳ ಆಗಿರುವ ಕಾರಣ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಾರುಗಳ ಬೆಲೆ ಹೆಚ್ಚಿಸುವುದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪನಿ ಸೋಮವಾರ ತಿಳಿಸಿದೆ.

ತಯಾರಿಕಾ ವೆಚ್ಚ ಏರಿಕೆ ಆಗಿದ್ದರಿಂದ ಕಳೆದ ವರ್ಷದಲ್ಲಿ ಕಂಪನಿಯ ವಾಹನಗಳ ಬೆಲೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಹೀಗಾಗಿ ಕಂಪನಿಯ ಮೇಲಿನ ಹೆಚ್ಚುವರಿ ವೆಚ್ಚದ ಒಂದಷ್ಟನ್ನು ಬೆಲೆ ಏರಿಕೆಯ ಮೂಲಕ ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ ಎಂದು ಷೇರುಪೇಟೆಗೆ ತಿಳಿಸಿದೆ. ಬೆಲೆ ಏರಿಕೆಯ ಪ್ರಮಾಣ ಎಷ್ಟಿರಲಿದೆ ಎನ್ನುವುದನ್ನು ಕಂಪನಿ ತಿಳಿಸಿಲ್ಲ.

ತಯಾರಿಕಾ ವೆಚ್ಚ ಹೆಚ್ಚಳದ ಕಾರಣ ನೀಡಿ ಕಂಪನಿಯು ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಈಗಾಗಲೇ ಎರಡು ಬಾರಿ ಕಾರುಗಳ ದರ ಏರಿಕೆ ಮಾಡಿದೆ. ಜನವರಿ 18ರಂದು ಆಯ್ದ ಮಾದರಿಗಳ ಬೆಲೆಯನ್ನು ₹ 34 ಸಾವಿರದವರೆಗೂ ಹೆಚ್ಚಿಸಿತ್ತು. ಆ ಬಳಿಕ ಏಪ್ರಿಲ್‌ 16ರಂದು ವಿವಿಧ ಮಾದರಿಯ ಕಾರುಗಳ ಬೆಲೆಯನ್ನು ಗರಿಷ್ಠ ₹ 22,500ರವರೆಗೆ ಹೆಚ್ಚಳ ಮಾಡಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.