ADVERTISEMENT

ಮಾರುತಿ ಸ್ವಿಫ್ಟ್ 15ನೇ ವರ್ಷದ ಸಂಭ್ರಮ; ದೇಶದಲ್ಲಿ 22 ಲಕ್ಷ ಕಾರುಗಳ ಮಾರಾಟ

ಏಜೆನ್ಸೀಸ್
Published 16 ಜೂನ್ 2020, 8:07 IST
Last Updated 16 ಜೂನ್ 2020, 8:07 IST
ಮಾರುತಿ ಸುಜುಕಿ ಸ್ವಿಫ್ಟ್ ಕಾರು
ಮಾರುತಿ ಸುಜುಕಿ ಸ್ವಿಫ್ಟ್ ಕಾರು    
""

ಬೆಂಗಳೂರು: ಹೆಚ್ಚಿನ ಮೇಲೇಜ್, ಉತ್ತಮ ವಿನ್ಯಾಸ, ಮಧ್ಯಮ ವರ್ಗದವರಿಗೂ ಕೈಗೆಟುಕುವ ಬೆಲೆಯ ಕಾರಣಗಳಿಂದಾಗಿ ಮಾರುತಿ ಸುಜುಕಿ ಸ್ವಿಫ್ಟ್ ಈವರೆಗೂ ಬೇಡಿಕೆ ಉಳಿಸಿಕೊಂಡಿದೆ. ಇದೀಗ ಸ್ವಿಫ್ಟ್ ಭಾರತದಲ್ಲಿ 15ನೇ ವರ್ಷದ ಸಂಭ್ರಮದಲ್ಲಿದೆ.

2005ರಲ್ಲಿ ಬಿಡುಗಡೆಯಾದ ಸ್ವಿಫ್ಟ್ ಡೀಸೆಲ್ ಮತ್ತು ಪೆಟ್ರೋಲ್ ಎರಡೂ ಮಾದರಿಗಳ ಎಂಜಿನ್‌ಗಳಿಂದ ಕಾರು ಪ್ರಿಯರ ಗಮನ ಸೆಳೆಯಿತು (ಪ್ರಸ್ತುತ ಪೆಟ್ರೋಲ್ ಮಾದರಿ ಮಾತ್ರ ಲಭ್ಯ).15 ವರ್ಷಗಳಲ್ಲಿ ದೇಶದಲ್ಲಿ 22 ಲಕ್ಷ ಸ್ವಿಫ್ಟ್ ಕಾರುಗಳು ಮಾರಾಟ ಕಂಡಿವೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಶ್ರೇಣಿಯಲ್ಲಿ ತೀವ್ರ ಪೈಪೋಟಿ ನೀಡುತ್ತಿದೆ. ಮೂರು ಬಾರಿ ಇಂಡಿಯನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿಗೆ ಪಾತ್ರವಾಗಿರುವ ದೇಶದ ಏಕೈಕ ಕಾರು ಸ್ವಿಫ್ಟ್.

ADVERTISEMENT

ಈ ಹದಿನೈದು ವರ್ಷಗಳಲ್ಲಿ ಸ್ವಿಫ್ಟ್ ಬಾಹ್ಯ ಹಾಗೂ ಒಳಗಿನ ವಿನ್ಯಾಸಗಳಲ್ಲಿ ಹಲವು ಸಲ ಬದಲಾವಣೆ ಮಾಡಿದೆ. ಸಾಮರ್ಥ್ಯ ಸಹ ಹೆಚ್ಚಿಸಲಾಗಿದೆ.

ಬಹುತೇಕ ಯುವಜನತೆ ಸಹ ಸ್ವಿಫ್ಟ್ ಬಗೆಗೆ‌ ಒಲವು ಹೊಂದಿರುವುದು ಶೇ 30ರಷ್ಟು ಮಾರುಕಟ್ಟೆ ವಿಸ್ತರಣೆಗೆ ಕಾರಣವಾಗಿರುವುದಾಗಿ ಕಂಪನಿ ಹೇಳಿದೆ. 2018ರಲ್ಲಿ ಮರು ವಿನ್ಯಾಸದೊಂದಿಗ 3ನೇ ತಲೆಮಾರಿನ ಸ್ವಿಫ್ಟ್ ಹೊರತರಲಾಯಿತು. ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಗಮನ ಸೆಳೆಚ ಮುಂಭಾಗದ ಗ್ರಿಲ್, ವಿಮಾನದ ಕಾಕ್‌ಪಿಟ್ ರೀತಿಯ ಒಳಾಂಗಣ ವಿನ್ಯಾಸಗಳಿಂದ 2019-20ನೇ ಸಾಲಿನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿತು.

ದೊಡ್ಡ ಕಾರುಗಳಲ್ಲಿರುವ ಬಹಳಷ್ಟು ಸೌಲಭ್ಯಗಳನ್ನು ಸ್ವಿಫ್ಟ್ ಒಳಗೊಂಡಿದೆ. ವಿನ್ಯಾಸ, ಕಡಿಮೆ ಬೆಲೆಯೊಂದಿಗೆ ಮೊದಲ ಬಾರಿಗೆ ಕಾರು ಖರೀದಿಸುವ ಯುವಜನತೆಯ ನೆಚ್ಚಿನ ಆಯ್ಕೆಯಾಗಿದೆ ಎಂದು ಮಾರುತಿ ಸುಜುಕಿ ಮಾರ್ಕೆಟಿಂಗ್ ಮತ್ತು ಮಾರಾಟ ಕಾರ್ಯಕಾರಿ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.

ಸ್ವಿಫ್ಟ್ ಬೆಲೆಗೆ ಇನ್ನೂ ಹಲವು ಕಂಪನಿಗಳ ಹ್ಯಾಚ್‌ಬ್ಯಾಕ್ ಕಾರು ಲಭ್ಯವಿದ್ದರೂ ಮಾರಾಟದಲ್ಲಿ ಮಾರುತಿ ಮುಂದಿದೆ. ಸ್ವಿಫ್ಟ್‌ ಆರಂಭಿಕ ಬೆಲೆ ₹5.19 ಲಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.