ADVERTISEMENT

ಸೆಪ್ಟೆಂಬರ್‌ನಿಂದ ಬೆಲೆ ಏರಿಕೆ: ಮಾರುತಿ ಸುಜುಕಿ

ಪಿಟಿಐ
Published 30 ಆಗಸ್ಟ್ 2021, 11:42 IST
Last Updated 30 ಆಗಸ್ಟ್ 2021, 11:42 IST
ಮಾರುತಿ ಸುಜುಕಿ ಇಂಡಿಯಾ –ಸಾಂದರ್ಭಿಕ ಚಿತ್ರ
ಮಾರುತಿ ಸುಜುಕಿ ಇಂಡಿಯಾ –ಸಾಂದರ್ಭಿಕ ಚಿತ್ರ   

ನವದೆಹಲಿ: ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವ ಕಾರಣ ಸೆಪ್ಟೆಂಬರ್‌ನಿಂದ ತನ್ನ ಎಲ್ಲ ಮಾದರಿಯ ಕಾರುಗಳ ಬೆಲೆ ಹೆಚ್ಚಿಸುವುದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಸೋಮವಾರ ತಿಳಿಸಿದೆ.

ವಿವಿಧ ರೀತಿಯ ತಯಾರಿಕಾ ವೆಚ್ಚಗಳಲ್ಲಿ ಏರಿಕೆ ಆಗುತ್ತಿರುವುದರಿಂದ ಕಳೆದ ವರ್ಷದಿಂದ ಕಂಪನಿಯ ವಾಹನಗಳ ವೆಚ್ಚವು ನಿರಂತರವಾಗಿ ಹೆಚ್ಚಾಗುತ್ತಿದೆ. ಆದ್ದರಿಂದ ವಾಹನಗಳ ಬೆಲೆ ಏರಿಕೆಯ ಮೂಲಕ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಕಂಪನಿಯು ಸದ್ಯ ₹ 2.99 ಲಕ್ಷದಿಂದ ₹ 12.39 ಲಕ್ಷದವರೆಗಿನ ಬೆಲೆಯ (ಎಕ್ಸ್‌ಷೋರೂಂ) ವಾಹನಗಳನ್ನು ಮಾರಾಟ ಮಾಡುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.