ಎಲೆಕ್ಟ್ರಿಕ್‌ ವಾಹನ ವಹಿವಾಟಿನ ಮೇಲೆ ಹೊಸದಾಗಿ 3 ಸಾವಿರ ಕೋಟಿ ಹೂಡಿಕೆ: ಮಹೀಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ನವದೆಹಲಿ: ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು ತನ್ನ ವಿದ್ಯುತ್ ಚಾಲಿತ ವಾಹನ (ಇ.ವಿ.) ವಹಿವಾಟಿನ ಮೇಲೆ ಮುಂದಿನ ಮೂರು ವರ್ಷಗಳಲ್ಲಿ ಹೊಸದಾಗಿ 3 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅನಿಶ್‌ ಶಾ ತಿಳಿಸಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ 9 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಕಂಪನಿಯು ಈಗಾಗಲೇ ಘೋಷಿಸಿದೆ. ಇದಲ್ಲದೆ ಹೊಸದಾಗಿ 3 ಸಾವಿರ ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ ಹೆಚ್ಚಿನ ಮೈತ್ರಿ ಮತ್ತು ಪಾಲುದಾರಿಕೆಗಳನ್ನು ಮಾಡಿಕೊಳ್ಳಲು ಕಂಪನಿ ಆಲೋಚಿಸುತ್ತಿದೆ.

ಕಂಪನಿಯು 2025ರ ವೇಳೆಗೆ 5 ಲಕ್ಷ ವಿದ್ಯುತ್ ಚಾಲಿತ ವಾಹನಗಳನ್ನು ಭಾರತದ ರಸ್ತೆಗಳಿಗೆ ಇಳಿಸುವ ಗುರಿ ಇಟ್ಟುಕೊಂಡಿದೆ. ಭಾರತದಲ್ಲಿ ತನ್ನ ‘ಇವಿ’ ವಹಿವಾಟಿಗಾಗಿ ಈಗಾಗಲೇ 1,700 ಕೋಟಿ ಹೂಡಿಕೆ ಮಾಡಿದ್ದು, ಹೊಸ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ 500 ಕೋಟಿ ಹೂಡಿಕೆ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.