ADVERTISEMENT

ಪ್ರಯಾಣಿಕ ವಾಹನ ಮಾರಾಟ ಹೆಚ್ಚಳ: ಎಸ್‌ಐಎಎಂ

ಹಣಕಾಸು ವರ್ಷದ ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕ

ಪಿಟಿಐ
Published 16 ಅಕ್ಟೋಬರ್ 2020, 13:36 IST
Last Updated 16 ಅಕ್ಟೋಬರ್ 2020, 13:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಯಾಣಿಕ ವಾಹನ ಮಾರಾಟವು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇಕಡ 17ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ (ಎಸ್‌ಐಎಎಂ) ಮಾಹಿತಿ ನೀಡಿದೆ.

2019ರ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 6.20 ಲಕ್ಷ ವಾಹನಗಳು ಮಾರಾಟವಾಗಿದ್ದವು. 2020ರ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 7.26 ಲಕ್ಷ ವಾಹನಗಳ ಮಾರಾಟ ಆಗಿದೆ. ಜನರು ಖರೀದಿ ಆರಂಭಿಸಿದ್ದಾರೆ. ಇದರ ಜತೆಗೆ ಹಬ್ಬದ ಬೇಡಿಕೆ ಈಡೇರಿಸಲು ಕಂಪನಿಗಳು ಸಹ ಸಜ್ಜಾಗುತ್ತಿವೆ ಎಂದು ಎಸ್‌ಐಎಎಂ ತಿಳಿಸಿದೆ.

ದ್ವಿಚಕ್ರ ವಾಹನ ಮಾರಾಟವು 46.82 ಲಕ್ಷದಿಂದ 46.90 ಲಕ್ಷಕ್ಕೆ ಏರಿಕೆ ಕಂಡಿದೆ.

ADVERTISEMENT

ವಾಣಿಜ್ಯ ವಾಹನಗಳ ಮಾರಾಟ ಸತತ ಆರನೇ ತ್ರೈಮಾಸಿಕದಲ್ಲಿಯೂ ಇಳಿಮುಖವಾಗಿದೆ. ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 20ರಷ್ಟು ಇಳಿಕೆಯಾಗಿದೆ. ತ್ರಿಚಕ್ರವಾಹನ ಮರಾಟ ಶೇ 75ರಷ್ಟು ಕಡಿಮೆಯಾಗಿದೆ. ಎಲ್ಲಾ ಮಾದರಿಗಳನ್ನೂ ಒಳಗೊಂಡ ಮಾರಾಟವು 56.51 ಲಕ್ಷದಿಂದ 55.96 ಲಕ್ಷಕ್ಕೆ ಇಳಿಕೆ ಕಂಡಿದೆ.

ಎರಡನೇ ತ್ರೈಮಾಸಿಕದಲ್ಲಿ ಕೆಲವು ವಿಭಾಗಗಳು ಚೇತರಿಕೆಯ ಲಕ್ಷಣ ತೋರಿಸಿವೆ. ಪ್ರಯಾಣಿಕ ವಾಹನ ಮತ್ತು ದ್ವಿಚಕ್ರ ವಾಹನ ಮಾರಾಟ ಸಕಾರಾತ್ಮವಾಗಿದೆ. ಆದರೆ, ಒಟ್ಟಾರೆಯಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟವು ಅತ್ಯಂತ ಕಡಿಮೆ ಮಟ್ಟದಲ್ಲಿಯೇ ಇದೆ ಎಂದು ಒಕ್ಕೂಟದ ಅಧ್ಯಕ್ಷ ಕೆನೆಚಿ ಅಯುಕವಾ ತಿಳಿಸಿದ್ದಾರೆ.

ಶನಿವಾರದಿಂದ ಆರಂಭವಾಗಲಿರುವ ಹಬ್ಬದ ಋತುವಿನಲ್ಲಿ ಉತ್ತಮ ಬೇಡಿಕೆ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.