ADVERTISEMENT

ಒಬ್ಬ ವ್ಯಕ್ತಿ, ಒಂದು ಕಾರು ಅರ್ಜಿ ತಳ್ಳಿಹಾಕಿದ ಸುಪ್ರೀಂ ಕೋರ್ಟ್

ಪಿಟಿಐ
Published 21 ಜನವರಿ 2023, 11:25 IST
Last Updated 21 ಜನವರಿ 2023, 11:25 IST
   

ನವದೆಹಲಿ (ಪಿಟಿಐ): ‘ಒಬ್ಬ ವ್ಯಕ್ತಿಗೆ ಒಂದು ಕಾರು’ ನಿಯಮ ಜಾರಿ ಹಾಗೂ ವ್ಯಕ್ತಿ ಹೊಂದಿರುವ ಎರಡನೇ ಕಾರಿಗೆ ಪರಿಸರ ತೆರಿಗೆ ಹಾಕಬೇಕು ಎಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ.ಎಸ್‌.ನರಸಿಂಹ ಅವರಿದ್ದ ನ್ಯಾಯಪೀಠ, ಅರ್ಜಿದಾರರು ಉಲ್ಲೇಖಿಸಿರುವ ಅಂಶಗಳು ಸರ್ಕಾರದ ನೀತಿಗೆ ಸಂಬಂಧಿಸಿದ್ದಾಗಿದೆ ಎಂದು ಅಭಿಪ್ರಾಯಪಟ್ಟಿತು.

ಅರ್ಜಿದಾರರು ಕಾನೂನಿನ ಪ್ರಕಾರ ಸಂಬಂಧಪಟ್ಟ ಇಲಾಖೆಯ ಎದುರು ಅಹವಾಲು ಹೇಳಿಕೊಳ್ಳಬಹುದು ಎಂದು ಹೇಳಿತು. ‘ಸುನಾಮಿ ಆನ್‌ ರೋಡ್ಸ್‌’ ಸೇವಾ ಸಂಸ್ಥೆ ಮಾಲಿನ್ಯ ತಡೆಗೆ ಪರಿಣಾಮಕಾರಿ ರಾಷ್ಟ್ರೀಯ ಕಾರ್ಯಕ್ರಮ ರೂಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದ್ಯತೆ ನೀಡಬೇಕು ಎಂದು ಕೋರಿ ಅರ್ಜಿಯನ್ನು ಸಲ್ಲಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.