ADVERTISEMENT

ಸೆಕೆಂಡ್‌ ಹ್ಯಾಂಡ್‌ ಕಾರ್ ವಹಿವಾಟಿಗೆ ಸ್ಕೋಡಾ ಪ್ರವೇಶ

ಪಿಟಿಐ
Published 7 ಅಕ್ಟೋಬರ್ 2020, 12:22 IST
Last Updated 7 ಅಕ್ಟೋಬರ್ 2020, 12:22 IST
ಸ್ಕೋಡಾ ಲೋಗೊ
ಸ್ಕೋಡಾ ಲೋಗೊ   

ಸ್ಕೋಡಾ ಆಟೊ ಇಂಡಿಯಾ ಕಂಪನಿಯು ಭಾರತದಲ್ಲಿ ಸೆಕೆಂಡ್‌ ಹ್ಯಾಂಡ್‌ ಕಾರುಗಳ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಆರಂಭಿಕ ಹಂತದಲ್ಲಿ ಮುಂಬೈ, ದೆಹಲಿ ರಾಜಧಾನಿ ಪ್ರದೇಶ, ಕೊಯಮತ್ತೂರು, ಜೈಪುರ, ಅಹಮದಾಬಾದ್‌, ಸೂರತ್‌, ವಡೋದರಾ, ಹೈದರಾಬಾದ್‌ ಮತ್ತು ಗೋವಾದಲ್ಲಿ ಈ ಸೇವೆ ಲಭ್ಯವಾಗಲಿದೆ. 12 ತಿಂಗಳಲ್ಲಿ ಹಂತ ಹಂತವಾಗಿ ದೇಶದಾದ್ಯಂತ ಇದನ್ನು ವಿಸ್ತರಿಸಲಾಗುವುದು ಎಂದು ಕಂಪನಿ ತಿಳಿಸಿದೆ.

‘ಸರ್ಟಿಫೈಡ್ಡ್‌ ಪ್ರಿ–ಓನ್ಡ್‌’ ಕಾರ್ಯಕ್ರಮದ ಮೂಲಕ ಈ ಮಾರುಕಟ್ಟೆಯನ್ನು ಪ್ರವೇಶಿಸಿರುವುದಾಗಿ ಅದು ಬುಧವಾರ ತಿಳಿಸಿದೆ. ಈ ಕಾರ್ಯಕ್ರಮದ ಅಡಿ ಖರೀದಿಸುವ ಸ್ಕೋಡಾ ವಾಹನಗಳಿಗೆ 24 ತಿಂಗಳವರೆಗೆ ಅಥವಾ 1.50 ಲಕ್ಷ ಕಿ.ಮೀ.ವರೆಗೆ ವಾರಂಟಿ ಸೌಲಭ್ಯ ಸಿಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಬೇರೆ ಕಂಪನಿಯ ಕಾರುಗಳಿಗೆ 12 ತಿಂಗಳವರೆಗೆ ಅಥವಾ 15 ಸಾವಿರ ಕಿ.ಮೀ.ವರೆಗೆ ವಾರಂಟಿ ಇರಲಿದೆ. ಗ್ರಾಹಕರು ಯಾವುದೇ ಕಂಪನಿಯ ತಮ್ಮಹಳೆ ಕಾರನ್ನು ಇಲ್ಲಿ ಮಾರಾಟ ಮಾಡಬಹುದಾಗಿದೆ. ಸ್ಕೋಡಾದ ಹೊಸ ಕಾರು ಖರೀದಿಸಿದರೆ ಆಕರ್ಷಕ ವಿನಿಮಯ ಬೋನಸ್‌ ಸಹ ಸಿಗಲಿದೆ.

ಸ್ಕೋಡಾ ಆಟೊದ ಬೆಳವಣಿಗೆಯ ಹಾದಿಯಲ್ಲಿ ‘ಸರ್ಟಿಫೈಡ್‌ ಪ್ರಿ–ಓನ್ಡ್‌’ ಒಂದು ಹೊಸ ಅಧ್ಯಾಯ ಎಂದು ಸ್ಕೋಡಾ ಆಟೊ ಇಂಡಿಯಾದ ಬ್ರ್ಯಾಂಡ್ ನಿರ್ದೇಶಕ ಜಾಕ್‌ ಹೊಲಿಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.