ADVERTISEMENT

ಸ್ಕೋಡಾ: ವಿನ್ಯಾಸ ಸ್ಪರ್ಧೆಯಲ್ಲಿ ಐವರು ಆಯ್ಕೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 11:57 IST
Last Updated 25 ಆಗಸ್ಟ್ 2021, 11:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹೊಸ ಕಾರಿನ ವಿನ್ಯಾಸವು ಇತರರಿಗೆ ತಕ್ಷಣಕ್ಕೆ ಗೊತ್ತಾಗಂತೆ ಮಾಡುವ ಮೇಲುಹೊದಿಕೆಯೊಂದನ್ನು ವಿನ್ಯಾಸ ಮಾಡಿಕೊಡುವಂತೆ ಸಾರ್ವಜನಿಕರಲ್ಲಿ ಮಾಡಿದ್ದ ಮನವಿಗೆ ಪ್ರತಿಯಾಗಿ 200ಕ್ಕೂ ಹೆಚ್ಚಿನ ವಿನ್ಯಾಸಗಳು ಬಂದಿವೆ ಎಂದು ಸ್ಕೋಡಾ ಕಂಪನಿ ತಿಳಿಸಿದೆ. ಈ ಪೈಕಿ ಒಟ್ಟು ಐದು ಜನ ಕಳುಹಿಸಿದ ವಿನ್ಯಾಸಗಳನ್ನು ಕಂಪನಿಯು ಅಂತಿಮಗೊಳಿಸಿದೆ.

ಬೆನ್‌ ಸ್ಟ್ಯುವರ್ಟ್‌ (ತಮಿಳುನಾಡು), ಪ್ರತೀಕ್ ಸೇಥಿ (ಮಹಾರಾಷ್ಟ್ರ), ರಿಜು ಕರುಣಾಕರನ್ (ಕರ್ನಾಟಕ), ರೋಹಿತ್ ಬಂಡ್ವಾಲ್ಕರ್ (ಮಹಾರಾಷ್ಟ್ರ), ಶ್ರೇಯಸ್ ಕರಂಬೇಲ್ಕರ್ (ಮಹಾರಾಷ್ಟ್ರ) ಅವರು ಸಿದ್ಧಪಡಿಸಿದ ವಿನ್ಯಾಸಗಳು ಆಯ್ಕೆಯಾಗಿವೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ಸ್ಕೋಡಾ ಕಂಪನಿಯ ಹಿರಿಯ ಅಧಿಕಾರಿಗಳಾದ ಗುರುಪ್ರತಾಪ್ ಬೊಪರಾಯ್, ಜ್ಯಾಕ್ ಹಾಲಿಸ್, ಆಲಿವರ್ ಸ್ಟೆಫಾನಿ ಈ ವಿನ್ಯಾಸಗಳ ತೀರ್ಪುಗಾರರಾಗಿದ್ದರು.

ಈ ಐದು ಜನರ ಪೈಕಿ ಜಯಶಾಲಿ ಆಗುವ ಒಬ್ಬರಿಗೆ, ಪ್ರೇಗ್‌ಗೆ ಪ್ರಯಾಣ ಬೆಳೆಸಿ, ಅಲ್ಲಿ ಕಂಪನಿಯ ವಿನ್ಯಾಸಗಳ ವಿಭಾಗದ ಮುಖ್ಯಸ್ಥರಾಗಿರುವ ಆಲಿವರ್ ಅವರನ್ನು ಭೇಟಿ ಮಾಡುವ ಅವಕಾಶ ಸಿಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.