ADVERTISEMENT

ಟಾಟಾ ಸಫಾರಿ: 10 ಸಾವಿರದ ಮೈಲಿಗಲ್ಲು

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 16:33 IST
Last Updated 28 ಜುಲೈ 2021, 16:33 IST
ಪುಣೆಯಲ್ಲಿ ಇರುವ ಟಾಟಾ ಮೋಟರ್ಸ್‌ ಕಂಪನಿಯ ಘಟಕದಲ್ಲಿ ತಯಾರಾಗಿರುವ 10 ಸಾವಿರದನೆಯ ‘ಸಫಾರಿ’ ಎಸ್‌ಯುವಿ
ಪುಣೆಯಲ್ಲಿ ಇರುವ ಟಾಟಾ ಮೋಟರ್ಸ್‌ ಕಂಪನಿಯ ಘಟಕದಲ್ಲಿ ತಯಾರಾಗಿರುವ 10 ಸಾವಿರದನೆಯ ‘ಸಫಾರಿ’ ಎಸ್‌ಯುವಿ   

ಬೆಂಗಳೂರು: ಟಾಟಾ ಮೋಟರ್ಸ್‌ ತನ್ನ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದಾಗಿರುವ ‘ಸಫಾರಿ’ ಮಾದರಿಯ 10 ಸಾವಿರ ವಾಹನಗಳನ್ನು ತಯಾರಿಸಿದೆ. ನೂರನೆಯ ಸಫಾರಿ ಎಸ್‌ಯುವಿ ಫೆಬ್ರುವರಿಯಲ್ಲಿ ತಯಾರಿಕಾ ಘಟಕದಲ್ಲಿ ಸಿದ್ಧವಾಗಿತ್ತು.

‘ಸಫಾರಿ ಎಸ್‌ಯುವಿ ತನಗೆ ಪೈಪೋಟಿ ನೀಡುವ ಇತರ ವಾಹನಗಳ ಮಾರುಕಟ್ಟೆಯಲ್ಲಿ ಶೇಕಡ 25.2ರಷ್ಟು ಪಾಲು ಹೊಂದಿದೆ. ಸಫಾರಿಯ ವಿನ್ಯಾಸ, ಪ್ರೀಮಿಯಂ ಗುಣಮಟ್ಟದ ಒಳಾಂಗಣ ವಿನ್ಯಾಸ, ಸುರಕ್ಷತಾ ಕ್ರಮಗಳನ್ನು ಗ್ರಾಹಕರು ಇಷ್ಟಪಟ್ಟಿದ್ದಾರೆ’ ಎಂದು ಕಂಪನಿ ಹೇಳಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಫಾರಿ ಮತ್ತು ಹ್ಯಾರಿಯರ್‌ ವಾಹನಗಳ ಒಟ್ಟು ಮಾರುಕಟ್ಟೆ ಪಾಲು ಹೈ ಎಸ್‌ಯುವಿ ಮಾರುಕಟ್ಟೆಯಲ್ಲಿ ಶೇ 41.2ರಷ್ಟು ಇದೆ ಎಂದು ಕಂಪನಿ ಹೇಳಿದೆ.

ADVERTISEMENT

‘ಹೊಸ ಸಫಾರಿ ವಾಹನದ ವಿಚಾರದಲ್ಲಿ ಈ ಮೈಲಿಗಲ್ಲು ಕ್ರಮಿಸಿರುವುದು ನಮಗೆ ಖುಷಿಕೊಟ್ಟಿದೆ’ ಎಂದು ಟಾಟಾದ ಪ್ರಯಾಣಿಕ ವಾಹನಗಳ ವಹಿವಾಟು ವಿಭಾಗದ ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.