ADVERTISEMENT

ಮುಂದಿನ ವರ್ಷ ಭಾರತಕ್ಕೆ ಟೆಸ್ಲಾ?

ರಾಯಿಟರ್ಸ್
Published 2 ಅಕ್ಟೋಬರ್ 2020, 19:25 IST
Last Updated 2 ಅಕ್ಟೋಬರ್ 2020, 19:25 IST
ಇಲಾನ್ ಮಸ್ಕ್
ಇಲಾನ್ ಮಸ್ಕ್   

ಬೆಂಗಳೂರು:ಅಮೆರಿಕ ಮೂಲದ ವಿದ್ಯುತ್ ಚಾಲಿತ ಕಾರುಗಳತಯಾರಿಕಾ ಕಂಪನಿ ಟೆಸ್ಲಾ, ಭಾರತದ ಮಾರುಕಟ್ಟೆಗೆ 2021ರಲ್ಲಿ ಲಗ್ಗೆ ಇಡಬಹುದು ಎಂಬ ಸೂಚನೆಯನ್ನು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಇಲಾನ್ ಮಸ್ಕ್ ಅವರು ಶುಕ್ರವಾರ ನೀಡಿದ್ದಾರೆ.

‘ಇಂಡಿಯಾ ವಾಂಟ್ಸ್ ಟೆಸ್ಲಾ’ (ಭಾರತಕ್ಕೆ ಟೆಸ್ಲಾ ಬೇಕು) ಎಂಬ ಬರಹ ಇರುವ ಟಿ–ಶರ್ಟ್‌ ಧರಿಸಿದ ಚಿತ್ರದ ಜೊತೆ ಅವರು ‘ಮುಂದಿನ ವರ್ಷ ಖಚಿತ’ ಎಂದು ಟ್ವೀಟ್ ಮಾಡಿದ್ದಾರೆ. ‘ಕಾಯುತ್ತಿರುವುದಕ್ಕೆ ಧನ್ಯವಾದ’ ಎಂದೂ ಬರೆದಿದ್ದಾರೆ.

ಕೇಂದ್ರ ಸರ್ಕಾರವು ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಸಂದರ್ಭದಲ್ಲೇ ಟೆಸ್ಲಾ ಕಾರುಗಳು ಭಾರತದ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.