ADVERTISEMENT

ರೇಸ್‌ ಪ್ರಿಯರಿಗೆ ಟಿವಿಎಸ್ ಮೋಟೊಸೋಲ್

ವಿಶ್ವನಾಥ ಎಸ್.
Published 18 ಸೆಪ್ಟೆಂಬರ್ 2019, 14:08 IST
Last Updated 18 ಸೆಪ್ಟೆಂಬರ್ 2019, 14:08 IST
   

ರೇಸಿಂಗ್‌ ಹವ್ಯಾಸ ಉಳ್ಳವರು, ರೇಸಿಂಗ್‌ ಪ್ರಿಯರ ಮನದಣಿಸಲುಟಿವಿಎಸ್‌ ಕಂಪನಿಯು ಗೋವಾದಲ್ಲಿ ಅಕ್ಟೋಬರ್‌ 18 ಮತ್ತು 19ರಂದು ಮೋಟೊಸೋಲ್ಕಾರ್ಯಕ್ರಮ ಆಯೋಜಿಸಿದೆ.ಮೊಟೊ ಕ್ರಾಸ್‌, ಡರ್ಟ್‌ ರೇಸಿಂಗ್‌, ಸ್ಲೋ ಮೋಟರ್‌ಸೈಕಲ್‌ ಡ್ರೈವಿಂಗ್‌, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರೇಸಿಂಗ್ ತಜ್ಞರು, ರೈಡರ್‌ಗಳೊಂದಿಗೆ ಹರಟೆ, ಸಂವಾದ, ಮನರಂಜನಾ ಕಾರ್ಯಕ್ರಮಗಳು ಹೊಸ ಲೋಕಕ್ಕೆ ಕರೆದೊಯ್ಯಲಿವೆ.

‘ಟಿವಿಎಸ್‌, ಭಾರತದಲ್ಲಿ ಅಸ್ತಿತ್ವ ಕಂಡುಕೊಂಡುಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಜನಪ್ರಿಯತೆ ಗಳಿಸಿಕೊಂಡಿದೆ. ಅದರಲ್ಲಿಯೂ ಮುಖ್ಯವಾಗಿ ರೇಸಿಂಗ್‌ ವಿಭಾಗದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಅದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಹಾಗೂ ಟಿವಿಎಸ್‌, ಟಿವಿಎಸ್‌ ರೇಸಿಂಗ್‌ ಮತ್ತು ಟಿವಿಎಸ್‌ ಅಪಾಚೆ ಬ್ರ್ಯಾಂಡ್‌ ಮೌಲ್ಯಕ್ಕೆ ಹೊಸ ಆಯಾಮ ನೀಡುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎನ್ನುತ್ತಾರೆಕಂಪನಿಯ ಪ್ರೀಮಿಯಂ ಮೋಟರ್‌ಸೈಕಲ್ಸ್‌ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಮೇಘಶ್ಯಾಮ್‌ ದಿಘೋಲೆ.

‘ಈ ಕಾರ್ಯಕ್ರಮ ಟಿವಿಎಸ್‌ ಸಮೂಹಕ್ಕೆ ಮಾತ್ರ ಸೀಮಿತವಾಗಿಲ್ಲ. ರೇಸಿಂಗ್‌ ಬಗ್ಗೆ ಆಸಕ್ತಿ ಇರುವ ಮತ್ತು ರೇಸಿಂಗ್‌ನಲ್ಲಿ ಭಾಗವಹಿಸುವ ಎಲ್ಲರಿಗೂ ಮುಕ್ತ ಅವಕಾಶವಿದೆ.ರೇಸಿಂಗ್ ಮತ್ತು ಸಾಹಸಮಯ ಚಟುವಟಿಕೆಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರೇಸಿಂಗ್‌ ವಿಜೇತರು ಮತ್ತು ಟಿವಿಎಸ್‌ನ ಸಂಶೋಧನೆ ಮತ್ತು ಅಭಿವೃದ್ಧಿ ತಂಡದೊಂದಿಗೆ ಸಂವಾದ, ಪರಸ್ಪರ ಅನುಭವ ಹಂಚಿಕೊಳ್ಳಲು ಇಲ್ಲಿ ಅವಕಾಶವಿದೆ.

ADVERTISEMENT

‘ಜಗತ್ತಿನಾದ್ಯಂತ 35 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಹೊಂದಿದ್ದು, ಅಪಾಚೆ ಓನರ್ಸ್‌ ಗ್ರೂಪ್‌, ಅಪಾಚೆ ರೇಸಿಂಗ್‌ ಎಕ್ಸ್‌ಪೀರಿಯನ್ಸ್‌ ಆ್ಯಂಡ್ ಅಪಾಚೆ ಪ್ರೊ ಪರ್ಫಾರ್ಮನ್ಸ್‌ ಪ್ರಮುಖವಾಗಿವೆ.ಟಿವಿಎಸ್‌ ರೇಸಿಂಗ್‌ ಜನಪ್ರಿಯತೆಯು ಹೆಚ್ಚಾಗುತ್ತಿದೆ. ದೇಶದಲ್ಲಿ 7 ವರ್ಷದಲ್ಲಿ ಗೆಲುವು ಸಾಧಿಸಿದ್ದೇವೆ. ಈ ವರ್ಷವೂ ಗೆಲುವು ಸಾಧಿಸುವ ವಿಶ್ವಾಸವಿದೆ.

ಮೇಘಶ್ಯಾಮ್‌ ದಿಘೋಲೆ

"ದೀರ್ಘಾವಧಿಯ ಯೋಜನೆಯಮೊದಲ ಭಾಗವಾಗಿ ಭಾರತದಲ್ಲಿ ಮೊದಲ ಆವೃತ್ತಿ ಆಯೋಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ನಡೆಸುವ ಚಿಂತನೆ ಇದೆ.

"ದ್ವಿಚಕ್ರ ವಾಹನದ ಬಗೆಗಿನ ಜನರ ಅಭಿರುಚಿ ಬದಲಾಗುತ್ತಿದೆ. ಕಚೇರಿ ಕೆಲಸಕ್ಕೆ ಹೋಗಲು ಮಾತ್ರವೇ ಬೈಕ್‌ ಖರೀದಿಸುತ್ತಿದ್ದ ಕಾಲವೊಂದಿತ್ತು. ಆದರೆ, ಈಗ ಹಾಗಿಲ್ಲ. ವಾರಾಂತ್ಯದ ಮೋಜಿಗೆಂದೇ ಬೈಕ್‌ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರವಾಸ, ಜಾಲಿ ರೈಡ್‌ಗೆ ಪ್ರೀಮಿಯಂ ಬೈಕ್‌ಗಳು ಬಳಕೆಯಾಗುತ್ತಿವೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.