ADVERTISEMENT

ಟಿವಿಎಸ್ ಎಕ್ಸ್‌ಎಲ್ 100 ಕಂಫರ್ಟ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 11:20 IST
Last Updated 30 ಸೆಪ್ಟೆಂಬರ್ 2019, 11:20 IST
ಟಿವಿಎಸ್ ಕಂಪನಿಯ ಯುಟಿಲಿಟಿ ಪ್ರಾಡಕ್ಟ್‌ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಎನ್‌.ಆರ್. ವಿಘ್ನೇಶ್ ಎಕ್ಸ್ಎಲ್‌100 ಕಂಫರ್ಟ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿದರು
ಟಿವಿಎಸ್ ಕಂಪನಿಯ ಯುಟಿಲಿಟಿ ಪ್ರಾಡಕ್ಟ್‌ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಎನ್‌.ಆರ್. ವಿಘ್ನೇಶ್ ಎಕ್ಸ್ಎಲ್‌100 ಕಂಫರ್ಟ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿದರು   

ಹುಬ್ಬಳ್ಳಿ: ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್‌ನ ನೂತನ ಎಕ್ಸ್‌ಎಲ್‌100 ಕಂಫರ್ಟ್‌ ದ್ವಿಚಕ್ರ ವಾಹನವನ್ನು ಕಂಪನಿಯ ಯುಟಿಲಿಟಿ ಪ್ರಾಡಕ್ಟ್ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಎನ್‌.ಆರ್‌. ವಿಘ್ನೇಶ್ ಹುಬ್ಬಳ್ಳಿಯಲ್ಲಿ ಸೋಮವಾರ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿ, ‘ನೂತನ ದ್ವಿಚಕ್ರ ವಾಹನವು ಐ ಟಚ್ ಸ್ಟಾರ್ಟ್, ಮೊಬೈಲ್ ಚಾರ್ಜಿಂಗ್, ಸಿಂಕ್ ಬ್ರೇಕಿಂಗ್ ತಂತ್ರಜ್ಞಾನ, ಉದ್ದವಾದ ಸೀಟು, ಕುಶನ್ ಬ್ಯಾಕ್ ರೆಸ್ಟ್‌ನೊಂದಿಗೆ ಕ್ರೋಮ್ ಲೆಗ್ ಗಾರ್ಡ್ ಮತ್ತು ಕ್ರೋಮ್ ಸೈಲೆನ್ಸರ್ ಗಾರ್ಡ್ ವೈಶಿಷ್ಟ್ಯಗಳನ್ನು ಹೊಂದಿದೆ’ ಎಂದರು.

‘99.7 ಸಿ.ಸಿ 4 ಸ್ಟ್ರೋಕ್ ಇಂಜಿನ್ ಸಾಮರ್ಥ್ಯ ಹೊಂದಿರುವ ವಾಹನವು ಒಂದು ಲೀಟರ್ ಪೆಟ್ರೋಲ್‌ಗೆ 60 ಕಿಲೋಮೀಟರ್ ಮೈಲೇಜ್ ನೀಡಲಿದೆ. ಕೂಲ್ ಮಿಂಟ್ ಬ್ಲ್ಯೂ, ಲಸ್ಟರ್ ಗೋಲ್ಡ್ ಹಾಗೂ ಸ್ಪಾರ್ಕಿಂಗ್ ಸಿಲ್ವರ್ ಬಣ್ಣಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇದರ ಎಕ್ಸ್‌ಶೋರೂಂ ಬೆಲೆ ಕರ್ನಾಟಕದಲ್ಲಿ ₹41,619 ಆಗಿದೆ’ ಎಂದು ತಿಳಿಸಿದರು.

ADVERTISEMENT

‘ದೇಶದಲ್ಲಿ ಮೊಪೆಡ್ ವಾಹನಗಳನ್ನು ತಯಾರಿಸುವ ಏಕೈಕ ಕಂಪನಿಯಾಗಿರುವ ಟಿವಿಎಸ್‌ ಒಟ್ಟು 1.25 ಕೋಟಿ ಗ್ರಾಹಕರನ್ನು ಹೊಂದಿದೆ. ಪ್ರಸ್ತುತ ಎಕ್ಸ್‌ಎಲ್ 100 ಐದು ಮಾದರಿಗಳಲ್ಲಿ ಲಭ್ಯವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.