ADVERTISEMENT

ಜನವರಿಯಿಂದ ಪೊಲೊ, ವೆಂಟೊ ಮಾದರಿಗಳ ಬೆಲೆ ಏರಿಕೆ: ಫೋಕ್ಸ್‌ವ್ಯಾಗನ್‌

ಪಿಟಿಐ
Published 24 ಡಿಸೆಂಬರ್ 2020, 13:49 IST
Last Updated 24 ಡಿಸೆಂಬರ್ 2020, 13:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಪೊಲೊ ಮತ್ತು ವೆಂಟೊ ಮಾದರಿಗಳ ಬೆಲೆಯನ್ನು ಜನವರಿಯಿಂದ ಶೇ 2.5ರವರೆಗೂ ಏರಿಕೆ ಮಾಡುವುದಾಗಿ ಫೋಕ್ಸ್‌ವ್ಯಾಗನ್‌ ಕಂಪನಿ ಗುರುವಾರ ತಿಳಿಸಿದೆ.

ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಬೆಲೆ ಏರಿಕೆಯ ನಿರ್ಧಾರ ತೆಗೆದುಕೊಂಡಿರುವುದಾಗಿ ಫೋಕ್ಸ್‌ವ್ಯಾಗನ್‌ ಪ್ಯಾಸೆಂಜರ್‌ ಕಾರ್ಸ್‌ ಇಂಡಿಯಾದ ವಕ್ತಾರರೊಬ್ಬರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರುತಿ ಸುಜುಕಿ, ನಿಸಾನ್‌, ರೆನೊ ಇಂಡಿಯಾ, ಹೋಂಡಾ ಕಾರ್ಸ್‌, ಮಹೀಂದ್ರಾ, ಫೋರ್ಡ್‌ ಸೇರಿದಂತೆ ಇನ್ನೂ ಹಲವು ಕಂಪನಿಗಳು ಸಹ ಜನವರಿಯಿಂದ ಬೆಲೆ ಏರಿಕೆ ಮಾಡುವುದಾಗಿ ಈಗಾಗಲೇ ಘೋಷಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.