ADVERTISEMENT

ಸೆಮಿಕಂಡಕ್ಟರ್ ಪೂರೈಕೆ ಕೊರತೆ: ವೋಲ್ವೊ ಟ್ರಕ್ ಉತ್ಪಾದನೆ ಸ್ಥಗಿತ

ಏಜೆನ್ಸೀಸ್
Published 23 ಮಾರ್ಚ್ 2021, 7:30 IST
Last Updated 23 ಮಾರ್ಚ್ 2021, 7:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸ್ವೀಡನ್ ಮೂಲದ ವಾಹನ ಉತ್ಪಾದಕ ಸಂಸ್ಥೆ ವೋಲ್ವೊ, ಸೆಮಿಕಂಡಕ್ಟರ್ ಪೂರೈಕೆಯ ಕೊರತೆ ಎದುರಿಸುತ್ತಿದ್ದು, ಟ್ರಕ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ವೋಲ್ವೊ, ಜಗತ್ತಿನ ಎರಡನೇ ಅತಿದೊಡ್ಡ ಘನವಾಹನ ಉತ್ಪಾದನಾ ಸಂಸ್ಥೆಯಾಗಿದೆ. ಉತ್ಪಾದನೆಗೆ ಅಡಚಣೆಯಾಗಿರುವ ಕುರಿತು ಸಂಸ್ಥೆ ಹೇಳಿಕೆಬಿಡುಗಡೆ ಮಾಡಿದ್ದು, ಜಾಗತಿಕವಾಗಿ ಈ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದಿದೆ.

ಒಟ್ಟಾರೆಯಾಗಿ ಉತ್ಪಾದನಾ ಘಟಕದಲ್ಲಿ ಎರಡರಿಂದ ನಾಲ್ಕು ವಾರಗಳ ಕಾಲ ಸಮಸ್ಯೆಯಾಗಬಹುದು. ಪ್ರಸ್ತುತ ಇರುವ ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ ಎಂದು ವೋಲ್ವೊ ತಿಳಿಸಿದೆ.

ADVERTISEMENT

ಸೆಮಿಕಂಡಕ್ಟರ್ ಜಾಗತಿಕ ಪೂರೈಕೆ ಸರಣಿಯಲ್ಲಿ ವ್ಯತ್ಯಯ ಉಂಟಾಗಿದೆ. ಅಲ್ಲದೆ, ಇತರ ಕೆಲವೊಂದು ಬಿಡಿಭಾಗಗಳ ಪೂರೈಕೆ ಕೂಡ ಕಡಿಮೆಯಿದೆ. ವಾಹನ ಉತ್ಪಾದನೆ ಮಾತ್ರವಲ್ಲದೆ, ಇತರ ಕೆಲವೊಂದು ಕ್ಷೇತ್ರ ಕೂಡ ಸಮಸ್ಯೆ ಎದುರಿಸಬಹುದು ಎಂದು ವೋಲ್ವೊ ಹೇಳಿದೆ.

ಕಂಪ್ಯೂಟರ್ ಚಿಪ್ ಉತ್ಪಾದನೆಗೆ ಕೋವಿಡ್ ಲಾಕ್‌ಡೌನ್ ಸಮಸ್ಯೆಯಾಗಿದ್ದು, ಮಾರುಕಟ್ಟೆಗೆ ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ.

ಫೋರ್ಡ್ ಮತ್ತುವೋಕ್ಸ್ ವ್ಯಾಗನ್ಕೂಡ ಬಿಡಿಭಾಗ ಪೂರೈಕೆ ಕೊರತೆಯಿಂದ ಉತ್ಪಾದನೆಯಲ್ಲಿ ಕಡಿತ ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.