ADVERTISEMENT

ಲಲನೆಯರ ನೆಚ್ಚಿನ ವೈಡ್ ಲೆಗ್‌ ಪ್ಯಾಂಟ್‌

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 8:18 IST
Last Updated 21 ಜೂನ್ 2020, 8:18 IST
ವೈಡ್ ಲೆಗ್ ಪ್ಯಾಂಟ್‌
ವೈಡ್ ಲೆಗ್ ಪ್ಯಾಂಟ್‌   

ಫ್ಯಾಷನ್‌ ಕ್ಷೇತ್ರದಲ್ಲಿ ಹೊಸತು ಬಂದಾಗ ಹಳತು ಬೆಲೆ ಕಳೆದುಕೊಳ್ಳುತ್ತದೆ ಎನ್ನುವುದು ಅನೇಕರ ಅಭಿಪ್ರಾಯ. ಆದರೆ ಹಳೆಯದಕ್ಕೆ ಹೊಸ ಸ್ಪರ್ಶ‌ ನೀಡಿ ಟ್ರೆಂಡ್‌ ಸೃಷ್ಟಿಸುವುದು ಈಗೀನ ವಿಶೇಷ. ಹಿಂದಿನ ಕಾಲದ ಅದೆಷ್ಟೋ ಫ್ಯಾಷನ್‌ ಟ್ರೆಂಡ್‌ಗಳು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಸಾಲಿಗೆ ಹೊಸತಾಗಿ ಸೇರ್ಪಡೆಯಾಗಿದೆ ವೈಡ್ ಲೆಗ್‌ ಪ್ಯಾಂಟ್(ಅಗಲ ಕಾಲಿನ ಪ್ಯಾಂಟ್‌)‌.

ಹಿಂದಿನ ಕಾಲದ ಬೆಲ್‌ ಬಾಟಮ್ ಪ್ಯಾಂಟ್‌ನಂತೆ ಕಾಣುವ ಈ ಪ್ಯಾಂಟ್ ಪಾಲಾಜೊದ ಮುಂದುವರಿದ ಭಾಗ ಎಂದರೂ ತಪ್ಪಾಗಲಿಕ್ಕಿಲ್ಲ. ಈ ಪ್ಯಾಂಟ್‌ಗಳು ಧರಿಸಲು ಸುಲಭ ಹಾಗೂ ಧರಿಸಿದರೆ ಟ್ರೆಂಡಿ ನೋಟ ಸಿಗುವುದರಲ್ಲಿ ಸಂಶಯವಿಲ್ಲ. ಯಾವುದೇ ಗಾತ್ರ ಹಾಗೂ ಆಕಾರದ ಹೆಣ್ಣುಮಕ್ಕಳಿಗೂ ಇದು ಹೊಂದಿಕೆ ಆಗುತ್ತದೆ. ಧರಿಸಿದಾಗ ಆರಾಮದಾಯಕ ಭಾವನೆ ಮೂಡಿಸುವ ಇವು ಟ್ರೆಂಡ್‌ನಿಂದ ಹಿಂದೆ ಸರಿಯುವುದಿಲ್ಲ ಎನ್ನುತ್ತಾರೆ ಫ್ಯಾಷನ್‌ ತಜ್ಞರು. ಎಲ್ಲಾ ಸಂದರ್ಭಕ್ಕೂ ಹೊಂದುವ ಈ ಪ್ಯಾಂಟ್‌ಗಳು ಇಂದಿನ ಲಲನೆಯರ ನೆಚ್ಚಿನ ಉಡುಪು ಎನ್ನಿಸಿಕೊಂಡಿದೆ.

ಕಚೇರಿಗೆ ಹೋಗುವಾಗ, ಹೊರಗಡೆ ಊಟಕ್ಕೆ ಹೋಗುವಾಗ, ಸಾಮಾನ್ಯ ಗೆಟ್‌–ಟುಗೆದರ್‌ ಮುಂತಾದ ಸಂದರ್ಭದಲ್ಲಿ ಇದು ಹೆಚ್ಚು ಸೂಕ್ತ ಎನ್ನಿಸುತ್ತದೆ. ಪಾಲಾಜೊ ಪ್ಯಾಂಟ್‌ನಂತೆ ವೈಡ್‌ ಲೆಗ್‌‌ ಪ್ಯಾಂಟ್ ಕೂಡ ಫ್ಯಾಷನ್‌ ಕ್ಷೇತ್ರದಲ್ಲಿ ಹೆಚ್ಚು ಬೇಡಿಕೆಯಲ್ಲಿದೆ.

ADVERTISEMENT

ಒಂದೇ ರೀತಿಯ ಸ್ಟೈಲ್ ಮಾಡಿ ಬೇಸರಗೊಂಡಿದ್ದರೆ ಉದ್ದ ಗೆರೆಗಳಿರುವ ವೈಡ್‌ ಆ್ಯಂಗಲ್‌ ಪ್ಯಾಂಟ್ ಧರಿಸಿ. ಪಾದದವರೆಗೆ ಹರಡಿ ಅಗಲವಾಗಿರುವ ಈ ಪ್ಯಾಂಟ್‌ ಮೇಲೆ ತೋಳಿಲ್ಲದ ಟಾಪ್‌ ಧರಿಸಬಹುದು. ಇದನ್ನು ಅರ್ಧ ಸೊಂಟಕ್ಕೆ ಹೊಂದುವಂತೆ ಧರಿಸಬೇಕು. ಇದರಿಂದ ನೀವು ಮಾದಕವಾಗಿ ಕಾಣಿಸಬಹುದು. ಇದನ್ನು ಧರಿಸಿದಾಗ ಇನ್‌ ಶರ್ಟ್ ರೀತಿಯಲ್ಲಿ ಟಾಪ್‌ ಧರಿಸಿವುದು ಸೂಕ್ತ. ಅದಕ್ಕೆ ಹೊಂದುವಂತಹ ಬೆಲ್ಟ್ ಅನ್ನು ಕೂಡ ಧರಿಸಬಹುದು.

ಈ ಪ್ಯಾಂಟ್‌ ಧರಿಸಿದಾಗ ಹೀಲ್ಡ್ ಧರಿಸಿ. ಇದರಿಂದ ಪ್ಯಾಂಟ್‌ನ ನೋಟ ಇನ್ನಷ್ಟು ಸ್ಪಷ್ಟವಾಗಿ ಕಾಣಿಸುತ್ತದೆ. ಅಲ್ಲದೇ ನಿಮ್ಮ ಕಾಲಿನ ಸೌಂದರ್ಯವು ಇದರಿಂದ ಹೆಚ್ಚುತ್ತದೆ. ಸ್ಟೈಲಿಷ್‌ ನೋಟ ಸಿಗಲು ವೆಡ್ಜ್ಸ್‌ ಅಥವಾ ಸ್ಟ್ಯಾಕಡ್ ಹೀಲ್‌ ಪಂಪ್‌ ಶೂಗಳನ್ನು ಧರಿಸಬಹುದು.

ಹೊಂದುವ ಟಾಪ್‌ನೊಂದಿಗೆ ಧರಿಸಿ

ಈ ಪ್ಯಾಂಟ್ ಧರಿಸಿದಾಗ ಸೂಕ್ತ ಟಾಪ್ ಧರಿಸುವುದು ಅಷ್ಟೇ ಮುಖ್ಯ. ಇಡೀ ಫ್ಯಾಂಟ್‌ನ ಸೌಂದರ್ಯ ಹೆಚ್ಚುವುದು ಟಾಪ್‌ ಮೇಲೆ ಅವಲಂಬಿತವಾಗಿದೆ. ಆ ಕಾರಣಕ್ಕೆ ಕ್ರಾಪ್ ಟಾಪ್‌, ತೋಳಿಲ್ಲದ ಟೀ ಶರ್ಟ್‌ಗಳು, ತುಂಬು ತೋಳಿದ ಟಾಪ್‌ಗಳು ಈ ಪ್ಯಾಂಟ್‌ಗೆ ಹೆಚ್ಚು ಹೊಂದಿಕೆಯಾಗುತ್ತವೆ. ಇದನ್ನು ಧರಿಸಿದಾದ ಸ್ಲಿಂಗ್ ಬ್ಯಾಗ್‌ ಧರಿಸಿದರೆ ಇನ್ನೂ ಹೆಚ್ಚು ಸ್ಟೈಲಿಷ್‌ ಆಗಿ ಕಾಣಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.