ADVERTISEMENT

ಕುರ್ತಾ ಟ್ವಿಟ್ಟರ್‌ ಟ್ರೆಂಡ್‌: ಗಂಡಸರದ್ದೇ ಮೇಲುಗೈ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 5:30 IST
Last Updated 8 ಜುಲೈ 2020, 5:30 IST
ಕುರ್ತಾ ಧರಿಸಿರುವ ಬಾಲಕ– ಚಿತ್ರ ಕೃಪೆ: ಟ್ವಿಟ್ಟರ್‌
ಕುರ್ತಾ ಧರಿಸಿರುವ ಬಾಲಕ– ಚಿತ್ರ ಕೃಪೆ: ಟ್ವಿಟ್ಟರ್‌   

ಈ ಲಾಕ್‌ಡೌನ್‌ ಅವಧಿಯಲ್ಲಿ ಜನರು ಬೇಸರ ಕಳೆಯಲು ಏನೇನೊ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಳೆಯುವುದೂ ಒಂದು. ಸುಮ್ಮನೆ ಅವರು ಇವರು ಹಾಕಿದ್ದ ಪೋಸ್ಟ್‌ಗಳನ್ನು ನೋಡಿದರೆ ಏನು ಮಜಾ ಇರುತ್ತದೆ ಅಲ್ಲವೇ? ಅದಕ್ಕಾಗಿ ದಿನಕ್ಕೊಂದು ಟ್ರೆಂಡ್‌ ಸೃಷ್ಟಿಸುತ್ತಿದ್ದಾರೆ. ಆ ಮೂಲಕ ಜನರನ್ನು ಎಂಗೇಜ್‌ ಆಗಿ ಇರುವಂತೆ ನೋಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ದಿನಕ್ಕೊಂದು ಟ್ರೆಂಡ್‌ ಆಗುತ್ತಿದೆ. ಕಳೆದ ಕೆಲ ದಿನಗಳಿಂದ ಸೀರೆ ಟ್ವಿಟ್ಟರ್ ಟ್ರೆಂಡ್ ಆದರೆ ಇವತ್ತು ಕುರ್ತಾ ಟ್ವಿಟ್ವರ್ ಟ್ರೆಂಡ್ ಆಗಿದೆ. ಹೆಣ್ಣುಮಕ್ಕಳೇ ಯಾಕೆ ಫ್ಯಾಷನ್ ಮಾಡಬೇಕು, ನಾವೇನು ಕಮ್ಮಿ ಎಂದುಕೊಂಡು ಗಂಡಸರು ಕೂಡ ಈ ಫ್ಯಾಷನ್‌ ಟ್ರೆಂಡ್‌ಗೆ ಕೈ ಜೋಡಿಸಿದ್ದಾರೆ. ಇದು ವಿಶೇಷ.

ಸೀರೆ ಟ್ವಿಟ್ಟರ್ ಟ್ರೆಂಡ್‌ನಂತೆ ಕುರ್ತಾ ಟ್ರೆಂಡ್‌ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದೇಶದಾದ್ಯಂತ ಅನೇಕ ಮಂದಿ ತಾವು ಬೇರೆ ಬೇರೆ ಸಂದರ್ಭಗಳಲ್ಲಿ ಕುರ್ತಾ ಧರಿಸಿ ತೆಗೆಸಿಕೊಂಡಿದ್ದ ಫೋಟೊವನ್ನು ಕುರ್ತಾ ಟ್ವಿಟ್ಟರ್‌ ಟ್ರೆಂಡ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಟ್ರೆಂಡ್‌ಗೆ ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳೇ ಹೆಚ್ಚಾಗಿ ಸ್ಪಂದಿಸಿದ್ದಾರೆ.

ಕುರ್ತಾ ಫ್ಯಾಷನ್ ಮಾರುಕಟ್ಟೆಗೆ ಬಂದು ಬಹಳ ವರ್ಷಗಳಾಗಿವೆ. ಆದರೆ ಅಂದಿನಿಂದ ಇಂದಿನವರೆಗೂ ಬೇರೆ ಬೇರೆ ರೂಪದ ಕುರ್ತಾ ವಿನ್ಯಾಸ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಕುರ್ತಾ ಫ್ಯಾಷನ್ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ. ಪುರುಷ ಹಾಗೂ ಮಹಿಳೆ ಇಬ್ಬರಿಗೂ ಸಲ್ಲುವ ಆರಾಮದಾಯಕ ಕುರ್ತಾ ಇಂದು ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆಗಿದೆ.

ADVERTISEMENT

ಸಿನಿಮಾ ನಟ–ನಟಿಯರು ಕೂಡ ಕುರ್ತಾ ಫ್ಯಾಷನ್‌ನಿಂದ ದೂರ ಉಳಿದಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ನಟ ಶಾರೂಕ್ ಖಾನ್ ಕುರ್ತಾ ಧರಿಸಿದ್ದ ಫೋಟೊವನ್ನು ಕುರ್ತಾಟ್ವಿಟ್ಟರ್‌ ಟ್ರೆಂಡ್‌ನಲ್ಲಿ ಹಂಚಿಕೊಂಡಿದೆ ಎಸ್‌. ಆರ್‌. ಕೆ ವಾರಿಯರ್ಸ್ಸ್‌ ಕ್ಲಬ್‌.

ಹೆಣ್ಣುಮಕ್ಕಳು ಕಚೇರಿ, ಕಾಲೇಜುಗಳಿಗೆ ಹೋಗುವಾಗ ಹೆಚ್ಚಾಗಿ ಕುರ್ತಾ ಧರಿಸುತ್ತಾರೆ. ಆದರೆ ಗಂಡು ಮಕ್ಕಳು ಮದುವೆ–ಮುಂಜಿಯಂತಹ ಸಮಾರಂಭಗಳಲ್ಲಿ ಹೆಚ್ಚಾಗಿ ಕುರ್ತಾ ಧರಿಸುತ್ತಾರೆ. ಬಣ್ಣ ಬಣ್ಣದ, ವಿವಿಧ ವಿನ್ಯಾಸದ ಕುರ್ತಾಗಳು ಫ್ಯಾಷನ್‌ ಟ್ರೆಂಡ್‌ನಲ್ಲಿ ಸೇರಿಹೋಗಿವೆ.

ಅನೇಕ ನೆಚ್ಚಿನ ಉಡುಪಾಗಿರುವ ಕುರ್ತಾ, ಈ ಟ್ವಿಟ್ಟರ್‌ ಟ್ರೆಂಡ್‌ ಮೂಲಕ ಇನ್ನಷ್ಟು ಖ್ಯಾತಿ ಗಳಿಸಿದೆ.

‘ಇವರನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ’ ಎಂದು ಬರೆದುಕೊಂಡಿರುವ ಮರ್ಸಿ ರಜಪೂತ್‌ ಪ್ರಧಾನಿಮೋದಿಯವರ ಫೋಟೊವನ್ನು ಹಂಚಿಕೊಂಡಿದ್ದಾರೆ.

ನನ್ನ ಬಳಿ ಇರುವ ಬಹುತೇಕ ಎಲ್ಲಾ ಫೋಟೊಗಳು ಕುರ್ತಾಟ್ವಿಟ್ಟರ್ ಟ್ರೆಂಡ್‌ ಹೊಂದಿಕೊಳ್ಳುತ್ತವೆ ಎಂದು ಬರೆದು ಫೋಟೊ ಹಂಚಿಕೊಂಡಿದ್ದಾರೆ ಮೋಹಕ್ ಶುಕ್ಲಾ.

‘ಗಂಡಸರಿಗೆ ಮಾತ್ರ ಯಾಕೆ ಎಲ್ಲಾ ಎಂಜಾಯ್‌ಮೆಂಟ್’ ಎಂದು ಬರೆದುಕೊಂಡು ಕುರ್ತಾದ ಫೋಟೊ ಹಂಚಿಕೊಂಡಿದ್ದಾರೆ ಪುಸ್ತಕ ‍ಪ್ರೇಮಿ ಹಾಗೂ ವಂದನಾ.

ಕಾರ್ಯಕ್ರಮವೊಂದರಲ್ಲಿ ರಾಹುಲ್‌ಗಾಂಧಿ ಹಾಗೂ ಅಶೋಕ್‌ ಗೆಹ್ಲೊಟ್‌ ಕುರ್ತಾ ಧರಿಸುವ ಫೋಟೊವನ್ನು ಹಂಚಿಕೊಂಡಿದ್ದಾರೆ ಅಭಿಷೇಕ್ ಸೊಮ್ರಾ.

ಇಲ್ಲಿಯವರೆಗೆ ಸೀರೆಟ್ವಿಟ್ಟರ್ ಟ್ರೆಂಡ್ ಇತ್ತು, ಈಗ ಯಾರೋ ಕುರ್ತಾ ಟ್ರೆಂಡ್ ಆರಂಭಿಸಿದ್ದಾರೆ. ನಂದೂ ಒಂದು ಇರ್ಲಿ ಎಂದು ಬರೆದುಕೊಂಡು ಫೋಟೊ ಹಂಚಿಕೊಂಡಿದ್ದಾರೆ ರಾಜೀವ್‌ ಸಿಂಗ್ ರಜಪೂತ್‌.

'ನಿಮ್ಮ ಬಳಿ ಕುರ್ತಾ ಪೈಜಾಮ ಇಲ್ಲದಿದ್ದರೆ ನಿಮ್ಮನ್ನು ನೀವು ಹಳ್ಳಿಯವರು ಎಂದು ಕರೆದುಕೊಳ್ಳಬೇಡಿ" ಎಂದಿದ್ದಾರೆ ಸೌರಭ್‌.

ತಮ್ಮ ಮಗ ಕುರ್ತಾ ಪೈಜಾಮ ಧರಿಸಿರುವ ಫೋಟೊ ಹಂಚಿಕೊಂಡಿರುವ ನವೇದ್ ರಿಯಾಜ್ ‘ಕುರ್ತಾ ಪೈಜಾಮದೊಂದಿಗೆ ಕಾರ್ಟೂನ್ ಎಂಟ್ರಿ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.