ADVERTISEMENT

Union Budget 2021: ಹಳೆ ವಾಹನ ವಿಲೇವಾರಿ ನೀತಿಯಿಂದ ಗುಜರಿಗೆ 51 ಲಕ್ಷ ವಾಹನಗಳು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2021, 13:54 IST
Last Updated 1 ಫೆಬ್ರುವರಿ 2021, 13:54 IST
ಗುಜರಿ ಸೇರಲಿವೆ 51 ಲಕ್ಷ ವಾಹನಗಳು!
ಗುಜರಿ ಸೇರಲಿವೆ 51 ಲಕ್ಷ ವಾಹನಗಳು!   

ಬೆಂಗಳೂರು: ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಸ್ಕ್ರ್ಯಾಪಿಂಗ್ ಪಾಲಿಸಿ ಜಾರಿಗೆ ತಂದಿದೆ. ಇದರನ್ವಯ ಹಳೆಯ ವಾಹನಗಳನ್ನು ಸ್ವಯಂಪ್ರೇರಿತವಾಗಿ ಗುಜರಿಗೆ ನೀಡಬೇಕಾಗುತ್ತದೆ. ಅಂದರೆ, ವೈಯಕ್ತಿಕ ಬಳಕೆಯ ವಾಹನಗಳಿಗೆ 20 ವರ್ಷ ಮತ್ತು ವಾಣಿಜ್ಯ ವಾಹನಗಳಿಗೆ 15 ವರ್ಷ ಎಂದು ನಿಗದಿಪಡಿಸಲಾಗಿದೆ. ಈ ಅವಧಿ ಮೀರಿದ ವಾಹನಗಳಿಗೆ ಕ್ಷಮತಾ ಪರೀಕ್ಷೆಯ ಪ್ರಮಾಣಪತ್ರ ಲಭಿಸುವುದಿಲ್ಲ. ಹೀಗಾಗಿ ಬಳಕೆಯಿಂದ ಹಿಂಪಡೆದು ಗುಜರಿಗೆ ನೀಡಬೇಕಾಗುತ್ತದೆ.

ಯಾವ ಉದ್ದೇಶ?

ಪರಿಸರ ಸ್ನೇಹಿ, ಎಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜನ ಮತ್ತು ಮಾಲಿನ್ಯ ನಿಯಂತ್ರಣ, ತೈಲ ಆಮದಿನ ಮೇಲೆ ಅವಲಂಬನೆ ಕಡಿಮೆ ಮಾಡುವ ಉದ್ದೇಶವನ್ನು ಇದು ಹೊಂದಿದೆ.

ADVERTISEMENT

51 ಲಕ್ಷ ವಾಹನ ಗುಜರಿಗೆ!

ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಹೊಸ ನೀತಿಯಿಂದಾಗಿ, 20 ವರ್ಷಕ್ಕೂ ಹಳೆಯ 51 ಲಕ್ಷ ಲಘು ಮೋಟಾರು ವಾಹನಗಳು ಗುಜರಿ ಸೇರಲಿವೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ವಾಹನ ಉದ್ಯಮಕ್ಕೆ ಉತ್ತೇಜನ

ಹಳೆಯ ವಾಹನವನ್ನು ಗುಜರಿಗೆ ಹಾಕುವ ನೀತಿಯಿಂದ, ವಾಹನ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ. ಹೊಸ ತಂತ್ರಜ್ಞಾನದ, ಮಿತ ಇಂಧನ ಮತ್ತು ಪುನರ್ಬಳಕೆಯ, ಕಡಿಮೆ ಮಾಲಿನ್ಯ ಹೊಂದಿರುವ ವಾಹನ ತಯಾರಿಕೆಗೆ ಉತ್ತೇಜನ ದೊರೆಯಲಿದೆ ಎಂದು ಗಡ್ಕರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.