ADVERTISEMENT

Budget 2021: ರೈಲ್ವೆಗೆ ದಾಖಲೆಯ ₹1.1 ಲಕ್ಷ ಕೋಟಿ ಅನುದಾನ

ಏಜೆನ್ಸೀಸ್
Published 1 ಫೆಬ್ರುವರಿ 2021, 7:18 IST
Last Updated 1 ಫೆಬ್ರುವರಿ 2021, 7:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರೈಲ್ವೆಗೆ ದಾಖಲೆಯ ₹1,10,055 ಕೋಟಿ ಅನುದಾನವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಈ ಪೈಕಿ ₹1,07,100 ಕೋಟಿ ಬಂಡವಾಳ ವೆಚ್ಚವಾಗಿರಲಿದೆ.

2023ರ ಡಿಸೆಂಬರ್ ಒಳಗೆ ಎಲ್ಲ ಬ್ರಾಡ್‌ಗೇಜ್ ರೈಲು ಮಾರ್ಗಗಳ ವಿದ್ಯುದೀಕರಣ ಪೂರ್ಣಗೊಳ್ಳಲಿದೆ ಎಂದೂ ಸಚಿವರು ತಿಳಿಸಿದ್ದಾರೆ.

₹1.75 ಲಕ್ಷ ಕೋಟಿ ಹೂಡಿಕೆ ಹಿಂಪಡೆತ ಗುರಿ

22ನೇ ಹಣಕಾಸು ವರ್ಷದಲ್ಲಿ ₹1.75 ಲಕ್ಷ ಕೋಟಿ ಹೂಡಿಕೆ ಹಿಂಪಡೆತದ ಗುರಿ ಹೊಂದಲಾಗಿದೆ ಎಂದು ಸಚಿವರು ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ಬಿಪಿಸಿಎಲ್, ಏರ್ ಇಂಡಿಯಾ, ಶಿಪ್ಪಿಂಗ್ ಕಾರ್ಪ್, ಬಿಇಎಂಎಲ್, ಪವನ್ ಹಾನ್ಸ್, ನಿಲಂಚಲ್ ಇಸ್ಪಾತ್ ಕಂಪನಿಗಳ ಹೂಡಿಕೆ ಹಿಂಪಡೆತ ಯೋಜನೆ 22ನೇ ಹಣಕಾಸು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಎಲ್‌ಐಸಿ ಐಪಿಒ ಈ ವರ್ಷ ಪೂರ್ಣಗೊಳ್ಳಲಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಕಳೆದ ವರ್ಷ ಸರ್ಕಾರವು ₹1.2 ಲಕ್ಷ ಕೋಟಿ ಹೂಡಿಕೆ ಹಿಂಪಡೆತ ಗುರಿ ಹಾಕಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.