ADVERTISEMENT

Budget 2021: 1500 ಅಂಶ ಜಿಗಿತ ಕಂಡ ಸೆನ್ಸೆಕ್ಸ್, 14000 ದಾಟಿದ ನಿಫ್ಟಿ

ಏಜೆನ್ಸೀಸ್
Published 1 ಫೆಬ್ರುವರಿ 2021, 7:55 IST
Last Updated 1 ಫೆಬ್ರುವರಿ 2021, 7:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಕೇಂದ್ರ ಬಜೆಟ್‌ ಮಂಡನೆಯಾಗುತ್ತಿದ್ದಂತೆಯೇ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 1500ಕ್ಕೂ ಹೆಚ್ಚು ಅಂಶ ಏರಿಕೆಯಾಗಿದೆ. ನಿಫ್ಟಿ ಕೂಡ ಗಣನೀಯ ಏರಿಕೆ ದಾಖಲಿಸಿದ್ದು, 14000 ಗಡಿ ದಾಟಿದೆ.

ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೊಸಿಸ್, ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಇಂಡಸ್ ಇಂಡ್ ಬ್ಯಾಂಕ್ ಷೇರುಗಳ ವಹಿವಾಟಿನಲ್ಲಿ ಏರಿಕೆಯಾಗಿದೆ.

ಬಜೆಟ್‌ನಲ್ಲಿ ಮೂಲಸೌಕರ್ಯ ಮತ್ತು ಇತರ ಯೋಜನೆಗಳ ಘೋಷಣೆಯಿಂದ ಷೇರುಮಾರುಕಟ್ಟೆಯಲ್ಲಿ ಈಗಿನ ಓಟ ಮುಂದುವರಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಮಧ್ಯಾಹ್ನ 1.20ರ ವೇಳೆ ನಡೆದ ವಹಿವಾಟಿನ ಪ್ರಕಾರ, ಸೆನ್ಸೆಕ್ಸ್ 1528.42 ಅಂಶ ಏರಿಕೆ ಕಂಡು 47,814.19 ತಲುಪಿದೆ. ನಿಫ್ಟಿ 386.15 ಹೆಚ್ಚಳ ದಾಖಲಿಸಿ 4,010 ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.