ADVERTISEMENT

ಆಮದು ಮಾಡಿಕೊಳ್ಳುವ ಮೊಬೈಲ್ ಫೋನ್ ಬಿಡಿಭಾಗ, ಚಾರ್ಜರ್ ಬೆಲೆ ಏರಿಕೆ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2021, 10:19 IST
Last Updated 1 ಫೆಬ್ರುವರಿ 2021, 10:19 IST
ಫೋನ್ ಬೆಲೆಯಲ್ಲಿ ಏರಿಕೆ
ಫೋನ್ ಬೆಲೆಯಲ್ಲಿ ಏರಿಕೆ   

ಬೆಂಗಳೂರು: ಸೋಮವಾರ ಮಂಡಿಸಲಾದ ಪ್ರಸಕ್ತ ಸಾಲಿನ ಬಜೆಟ್‌ ಪ್ರಕಾರ, ದೇಶದಲ್ಲಿ ಇನ್ನು ಆಮದು ಮಾಡಿಕೊಳ್ಳುವ ಫೋನ್ ಬೆಲೆಯಲ್ಲಿ ಏರಿಕೆಯಾಗಲಿದೆ. ದೇಶದಲ್ಲಿ ಸ್ಮಾರ್ಟ್‌ಫೋನ್ ಉತ್ಪಾದನೆ ಉತ್ತೇಜನಗೊಳಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ವಿದೇಶದಿಂದ ಆಮದಾಗುವ ಸ್ಮಾರ್ಟ್‌ಫೋನ್ ಮತ್ತು ಮೊಬೈಲ್ ಬಿಡಿಭಾಗಗಳ ಬೆಲೆ ಏರಿಕೆಯಾಗುವುದರಿಂದ, ದೇಶಿಯ ಉತ್ಪಾದನೆ ಮತ್ತು ತಯಾರಿಕೆ ಕ್ಷೇತ್ರದ ಮೇಲೆ ಪ್ರಯೋಜನವಾಗಲಿದೆ. ಹೆಚ್ಚಿನ ಸ್ಮಾರ್ಟ್‌ಫೋನ್ ಕಂಪನಿಗಳು ಪ್ರಸ್ತುತ ವಿದೇಶದಿಂದ ಆಮದು ಮಾಡಿಕೊಂಡು, ಭಾರತದಲ್ಲಿ ಮಾರುಕಟ್ಟೆಗೆ ಹೊಸ ಫೋನ್ ಪರಿಚಯಿಸುತ್ತಿವೆ.

ಮೊಬೈಲ್ ಬಿಡಿಭಾಗ ಮತ್ತು ಚಾರ್ಜರ್‌, ಕೇಬಲ್ ಇತ್ಯಾದಿ ಸರಕುಗಳನ್ನು ಆಮದು ಮಾಡಿಕೊಳ್ಳುವ ಬದಲಿಗೆ, ದೇಶದಲ್ಲೇ ಉತ್ಪಾದನೆ ಮಾಡಿ, ಜೋಡಣೆ ಮಾಡಿದರೆ ಅದಕ್ಕೆ ಸರ್ಕಾರದಿಂದ ಪ್ರೋತ್ಸಾಹ ಕೂಡ ದೊರೆಯಲಿದೆ. ಅಲ್ಲದೆ, ಮೇಕ್ ಇನ್ ಇಂಡಿಯಾ ಯೋಜನೆಯ ಪ್ರಯೋಜನ ಲಭ್ಯವಾಗಲಿದೆ. ಆದರೆ ಆಮದು ಮಾಡಿಕೊಂಡರೆ ಹೆಚ್ಚುವರಿ ಸುಂಕ, ದರ ಪಾವತಿಸಬೇಕಾಗಿದೆ.

ADVERTISEMENT

ಹೀಗಾಗಿ ದೇಶಿಯ ಉತ್ಪಾದನೆ ಹೆಚ್ಚಿನ ಒತ್ತು ನೀಡುವ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ, ಪ್ರಸಕ್ತ ಸಾಲಿನ ಬಜೆಟ್ ಮೂಲಕ ಕೈಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.