ADVERTISEMENT

ರಾಜ್ಯ ಬಜೆಟ್‌: ನಿರೀಕ್ಷೆಗಳು ಹತ್ತಾರು..

ಕೆರೆ ತುಂಬಿಸಲು, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಿಗುವುದೇ ಅನುದಾನ

ಕೆ.ಎಸ್.ಸುನಿಲ್
Published 7 ಮಾರ್ಚ್ 2021, 19:30 IST
Last Updated 7 ಮಾರ್ಚ್ 2021, 19:30 IST
ಹಾಸನ ಬೂವನಹಳ್ಳಿ ವಿಮಾನ ನಿಲ್ದಾಣ ಸ್ಥಳ.
ಹಾಸನ ಬೂವನಹಳ್ಳಿ ವಿಮಾನ ನಿಲ್ದಾಣ ಸ್ಥಳ.   

ಹಾಸನ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾರ್ಚ್‌ 8ರಂದು ಮಂಡಿಸುವ ಆಯವ್ಯಯದ ಮೇಲೆಜಿಲ್ಲೆಯ ಜನರ ದೃಷ್ಟಿ ನೆಟ್ಟಿದೆ.

ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬಜೆಟ್‌ನಲ್ಲಿ ಜಿಲ್ಲೆಗೆ ಹಲವು ಯೋಜನೆ ಘೋಷಿಸಿದ್ದರು.ಆದರೆ ಬಿಜೆಪಿ ಸರ್ಕಾರ ಬಂದ ಬಳಿಕ ಜಿಲ್ಲೆಯನ್ನು ಕಡೆಗಣಿಸಲಾಗಿದೆ ಎಂಬುದು ಜೆಡಿಎಸ್‌ ಮತ್ತು ಕಾಂಗ್ರೆಸ್‌ಆರೋಪವಾಗಿದೆ.

ಈ ಬಜೆಟ್‌ನಲ್ಲಾದರೂ ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಜತೆಗೆ ಹೊಸಯೋಜನೆ, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ, ಕಾಫಿ ಬೆಳೆಗಾರರ ಹಿತ ಕಾಯುವ ಯೋಜನೆಗಳು,ವನ್ಯಪ್ರಾಣಿಗಳ ಹಾವಳಿ ತಡೆಗಟ್ಟಲು ಹಾಗೂ ನಷ್ಟ ಪರಿಹಾರ ನೀಡಲು ವಿಶೇಷ ಯೋಜನೆಯೊಂದಿಗೆಸಮರ್ಪಕ ಅನುದಾನ ಬೇಕಿದೆ.

ADVERTISEMENT

ಹಾಸನದಲ್ಲಿ ವಿಮಾನ ನಿಲ್ದಾಣಕ್ಕಾಗಿ 543 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ದಶಕಗಳೇ ಕಳೆದಿದ್ದು,ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಡತ ಮಂಡಿಸಲು ಸಿ.ಎಂ. ಸೂಚಿಸಿದ್ದು,ಅಂತರರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ಕನಸ ನನಸಾಗಲು ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆಯಿದೆ.ಹಾಸನಕ್ಕೆ ವಿಮಾನ ನಿಲ್ದಾಣ ಬೇಕೆಂಬುದು ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡರ ಕನಸು. ಜಿಲ್ಲೆಯ ಆರ್ಥಿಕಮತ್ತು ಪ್ರವಾಸೋದ್ಯಮ ಸಾಮರ್ಥ್ಯಗಳನ್ನು ಗಮನದಲ್ಟಿಟ್ಟುಕೊಂಡು 1967ರಲ್ಲಿ ವಿಮಾನ ನಿಲ್ದಾಣದಪ್ರಸ್ತಾವನೆಯನ್ನು ಅಂದಿನ ಸರ್ಕಾರ ಮಂಡಿಸಿತು.

ಕೃಷಿ ಆಧಾರಿತ ಉತ್ಪಾದನೆ ಕೇಂದ್ರ ಸ್ಥಾಪನೆ ಆಗಬೇಕು. ಅತಿವೃಷ್ಟಿ, ಅಕಾಲಿಕ ಮಳೆ ಸೇರಿ ಪ್ರಾಕೃತಿಕವಿಕೋಪಗಳು ಮತ್ತು ಇತರ ಹಲವು ಕಾರಣಗಳಿಂದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕೇರಳ ಮಾದರಿಯಲ್ಲಿ ರಾಜ್ಯದಲ್ಲೂ ಕಾಫಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಕಾಫಿ ಬೆಳೆಗಾರರು ಒತ್ತಾಯಿಸಿದ್ದಾರೆ.

ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಹೊಳೆನರಸೀಪುರ ತಾಲ್ಲೂಕಿನ ಶ್ರೀರಾಮದೇವರ ಕಟ್ಟೆ ಅಭಿವೃದ್ಧಿಗೆ ₹ 45ಕೋಟಿ ಘೋಷಣೆಯಾಗಿತ್ತಾದರೂ ಯಾವುದೇ ಪ್ರಗತಿಯಾಗಿಲ್ಲ. ಕಾಡಾನೆಗಳ ಹಾವಳಿಗೆ ತಡೆಗೆ ಶಾಶ್ವತಯೋಜನೆ ರೂಪಿತವಾಗಬೇಕಿದೆ.

ಅರಸೀಕೆರೆ ತಾಲ್ಲೂಕಿಗೆ ರಾಜ್ಯದ ಮೂರನೇ ಕರಡಿಧಾಮ ಘೋಷಣೆಯಾಗಿ ಎರಡು ವರ್ಷ ಕಳೆದರೂ ಯೋಜನೆಅನುಷ್ಠಾನಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಕರಡಿ ದಾಳಿಯಿಂದ ಹಲವರು ಗಾಯಗೊಂಡು ಪ್ರಾಣಕಳೆದುಕೊಂಡಿದ್ದಾರೆ. ಕೆಲವರು ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ.

ಕೃಷಿ ಜಮೀನಿನಲ್ಲಿ ಏಕಾಏಕಿ ಮೇಲೆರೆಗುವ ಕರಡಿಗಳು ರೈತನ ಬದುಕನ್ನು ಬರಡು ಮಾಡಿದ ನಿರ್ದೇಶನಗಳಿವೆ.ಆಹಾರ ಅರಸಿ ನಾಡಿಗೆ ಬಂದ ಕರಡಿಗಳು ವಿದ್ಯುತ್ ಬೇಲಿಗೆ ಸಿಲುಕಿ ಮೃತಪಡುತ್ತಿವೆ.ಉದ್ದೇಶಿತ ಕರಡಿಧಾಮ ಸಾಕಾರಗೊಂಡಲ್ಲಿ ಜೇನುಕಲ್‌ ಬೆಟ್ಟ, ಹಂದಿ ಮರಟಿ, ಚಿಕ್ಕಬೆಟ್ಟ, ಹಿರೇಬೆಟ್ಟ, ಹಿಟ್ಟಕಲ್ಲು, ಗೊರಲು ಮರಟಿ, ಗರುಡನಗಿರಿ, ದೇಶಾಣಿ, ಬೆಲವತ್ತಳ್ಳಿ, ಬೆಟ್ಟದಪುರ ಸೇರಿದಂತೆ ಸುತ್ತಮುತ್ತಲ ಗುಡ್ಡಗಳಲ್ಲಿರುವ ನೂರಾರು ಕರಡಿಗಳ ಜೀವ ರಕ್ಷಣೆಗೂ ಶಾಶ್ವತ ಪರಿಹಾರ ದೊರಕಿದಂತಾಗಲಿದೆ.

ಹಾಸನದ ಹೊರವಲಯದ ಗಂಡೆಕಟ್ಟೆ ಅರಣ್ಯಧಾಮವನ್ನು ಜೀವವೈವಿಧ್ಯ ಉದ್ಯಾನವನ್ನಾಗಿ ಅಭಿವೃದ್ಧಿಪಡಿಸಬೇಕೆಂದು ರಾಜ್ಯ ಜೀವ ವೈವಿಧ್ಯ ಅಭಿವೃದ್ಧಿ ಮಂಡಳಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಅರಣ್ಯಇಲಾಖೆಯೂ ಯೋಜನೆ ರೂಪಿಸಿ ಅನುದಾನಕ್ಕೆ ಕಾಯುತ್ತಿದೆ.

ಹಾಸನ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರದಲ್ಲಿ ₹ 144ಕೋಟಿ ಮಂಜೂರಾಗಿತ್ತು. ಹಾಸನ ಶಾಸಕ ಆ ಮೊತ್ತವನ್ನು ಕೆರೆ ಹಾಗೂ ಉದ್ಯಾನ ಅಭಿವೃದ್ಧಿಗೆ ವರ್ಗಾಯಿಸಿದ್ದರು. ಈ ವಿಚಾರ ಸಿ.ಎಂ ಗಮನಕ್ಕೆ ತಂದ ಪರಿಣಾಮ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಪ್ರತ್ಯೇಕಅನುದಾನ ನೀಡುವ ಭರವಸೆ ನೀಡಿದ್ದಾರೆ.

ಹಾಸನ ತಾಲ್ಲೂಕಿನ ಸಾಲಗಾಮೆ ಹೋಬಳಿ ಕೆರೆಗಳನ್ನು ಯಗಚಿ ಯೋಜನೆ ನೀರಿನಿಂದ ತುಂಬಿಸುವ ಬೇಡಿಕೆಇದೆ. ಈ ಸಂಬಂಧ ಈಗಾಗಲೇ ಡಿಪಿಆರ್‌ ಸಿದ್ದಪಡಿಸಿದ್ದು, ಬಜೆಟ್‌ನಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆಘೋಷಣೆಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.