ADVERTISEMENT

ಡೀಸೆಲ್ ಮೇಲೆ 4 ರೂ, ಪೆಟ್ರೋಲ್ ಮೇಲೆ 2.5 ರೂ. ಕೃಷಿ ಸೆಸ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 11:44 IST
Last Updated 1 ಫೆಬ್ರುವರಿ 2021, 11:44 IST
   

ನವದೆಹಲಿ: ಪೆಟ್ರೋಲ್, ಡೀಸೆಲ್ ಮೇಲೆ ಕೃಷಿ ಸೆ್ಸ್ ವಿಧಿಸಲಾಗಿದ್ದು, ಡೀಸೆಲ್ ಮೇಲೆ 4 ರೂ, ಪೆಟ್ರೋಲ್ ಮೇಲೆ 2.5 ರೂ. ಸೆೆಸ್ವಿಧಿಸಲಾಗಿದೆೆ.

ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ದರ ನೂರರ ಗಡಿಯಲ್ಲಿ ಬಂದು ನಿಂತಿದ್ದು, ಮತ್ತೆ ಸೆಸ್ ವಿಧಿಸಲಾಗಿದೆ. ಆದರೆ ಇದರ ಹೊರೆ ಗ್ರಾಹಕರಿಗೆ ವರ್ಗಾವಣೆಯಾಗುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಡೀಸೆಲ್ , ಪೆಟ್ರೋಲ್ ಮೇಲೆ ಕೃಷಿ ಸೆಸ್ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.