ADVERTISEMENT

ಬಜೆಟ್ ಮಂಡಿಸಿದ್ದು ನಿರ್ಮಲಾ; ಟ್ರೆಂಡ್ ಆಗಿದ್ದು ರಾಹುಲ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2021, 13:22 IST
Last Updated 1 ಫೆಬ್ರುವರಿ 2021, 13:22 IST
ಸಂಸತ್ತಿನಲ್ಲಿ ಬಜೆಟ್ ಮಂಡನೆಯ ವೇಳೆ ರಾಹುಲ್ ಗಾಂಧಿ ರಿಯಾಕ್ಷನ್
ಸಂಸತ್ತಿನಲ್ಲಿ ಬಜೆಟ್ ಮಂಡನೆಯ ವೇಳೆ ರಾಹುಲ್ ಗಾಂಧಿ ರಿಯಾಕ್ಷನ್   

ನವದೆಹಲಿ: ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಗದರಹಿತ ಡಿಜಿಟಲ್ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಮಂಡಿಸಿದ್ದಾರೆ.

ಆದರೆ ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಸಂದರ್ಭದಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ.

ಸದಾ ತಮ್ಮ ಹಾವಭಾವಗಳಿಂದ ಹೆಚ್ಚು ಗಮನ ಸೆಳೆಯುವ ರಾಹುಲ್ ಗಾಂಧಿ, ವಿತ್ತ ಸಚಿವರು ಬಜೆಟ್ ಮಂಡಿಸುತ್ತಿದ್ದಾಗ ತುಂಬಾನೇ ಬೇಸರ ಹಾಗೂ ಆಲಸಿ ಮನೋಭಾವದಿಂದ ಕಂಡುಬಂದಿದ್ದರು.

ADVERTISEMENT

ಮಾಸ್ಕ್ ಧರಿಸಿದ್ದ ರಾಹುಲ್ ಗಾಂಧಿ ಹಣೆಗೆ ಕೈಯಿಟ್ಟು ಚಿಂತಿತರಾಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲು ಕಾರಣವಾಗಿತ್ತು.

ಈ ಹಿಂದೆಯೂ ಹಲವು ಬಾರಿ ಸಂಸತ್ತಿನೊಳಗೆ ರಾಹುಲ್ ಗಾಂಧಿ ತಮ್ಮ ವರ್ತನೆಗಳಿಂದ ಗಮನ ಸೆಳೆದಿದ್ದರು. ಹಿಂದೊಮ್ಮೆ ಪ್ರಧಾನಿ ಭಾಷಣದ ವೇಳೆ ಕಣ್ಸನೆ ಮೂಲಕ ಹೆಚ್ಚು ಚರ್ಚೆಗೆ ಪಾತ್ರವಾಗಿದ್ದರು.

ಏತನ್ಮಧ್ಯೆ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಜನರ ಕೈಗೆ ಹಣವನ್ನು ನೀಡುವುದನ್ನು ಮರೆತುಬಿಡಿ. ನೇರಂದ್ರ ಮೋದಿ ಸರ್ಕಾರ ದೇಶದ ಸಂಪತ್ತನ್ನು ತನ್ನ ನಿಕಟ ಬಂಡವಾಳಶಾಹಿ ಉದ್ಯಮ ಗೆಳೆಯರಿಗೆ ಹಸ್ತಾಂತರಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.