ADVERTISEMENT

Karnataka Budget 2021| ಫ್ಲ್ಯಾಟ್‌ ನೋಂದಣಿ ಮುದ್ರಾಂಕ ಶುಲ್ಕ ಇಳಿಕೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 9:49 IST
Last Updated 8 ಮಾರ್ಚ್ 2021, 9:49 IST
ಪ್ರಾತಿನಿಧಿಕ ಚಿತ್ರ (ಪ್ರಜಾವಾಣಿ ಚಿತ್ರ)
ಪ್ರಾತಿನಿಧಿಕ ಚಿತ್ರ (ಪ್ರಜಾವಾಣಿ ಚಿತ್ರ)   

ಬೆಂಗಳೂರು: ಫ್ಯಾಟ್‌ಗಳ ನೋಂದಣಿಯ ಮುದ್ರಾಂಕ ಶುಲ್ಕವನ್ನು ಸರ್ಕಾರ ಶೇ. 5ರಿಂದ 3ಕ್ಕೆ ಇಳಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಸೋಮವಾರ ತಮ್ಮ 8ನೇ ಬಜೆಟ್‌ ಮಂಡಿಸಿದರು.

'ಕೈಗೆಟಕುವ ದರಗಳ ಮನೆಗಳನ್ನು ಪ್ರೋತ್ಸಾಹಿಸಲು 35 ಲಕ್ಷ ರೂ.ಗಳಿಂದ 45 ಲಕ್ಷ ರೂ.ಗಳವರೆಗಿನ ಮೌಲ್ಯದ ಅಪಾರ್ಟ್‌ಮೆಂಟ್‌ಗಳ ಮೊದಲನೇ ನೋಂದಣಿಗೆ ಮುದ್ರಾಂಕ ಶುಲ್ಕ ಶೇ.5 ರಿಂದ ಶೇ.3 ಕ್ಕೆ ಇಳಿಕೆ,' ಮಾಡಲಾಗಿದೆ ಎಂದು ಅವರು ಘೋಷಿಸಿದರು.
ಶಾಲೆ

ಗುರಿ ನಿಗದಿ

2021-22 ನೇ ಆರ್ಥಿಕ ವರ್ಷದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 24580 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿ ನಿಗದಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.