ADVERTISEMENT

Budget 2021 – ಹಿಂದೆಂದೂ ಕಂಡಿರದಂತಹ ಪರಿಸ್ಥಿತಿಯಲ್ಲಿ ಬಜೆಟ್ ತಯಾರಿ: ನಿರ್ಮಲಾ

ಏಜೆನ್ಸೀಸ್
Published 1 ಫೆಬ್ರುವರಿ 2021, 5:53 IST
Last Updated 1 ಫೆಬ್ರುವರಿ 2021, 5:53 IST
ಬಜೆಟ್ ಮಂಡನೆ ಮಾಡುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ – ಕೃಪೆ; ಲೋಕಸಭಾ ಟಿವಿ
ಬಜೆಟ್ ಮಂಡನೆ ಮಾಡುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ – ಕೃಪೆ; ಲೋಕಸಭಾ ಟಿವಿ   

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021–22ನೇ ಹಣಕಾಸು ವರ್ಷದ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಇದೇ ಮೊದಲ ಬಾರಿಗೆ ಕಾಗದರಹಿತ ಬಜೆಟ್ ಮಂಡಿಸಲಾಗುತ್ತಿದೆ.

ದೇಶದೊಳಗಿನ ಅಥವಾ ದೇಶದ ಪ್ರದೇಶಗಳ ಮೇಲೆ ಸಂಭವಿಸಿರಬಹುದಾದ ವಿಪತ್ತುಗಳ ದೃಷ್ಟಿಯಿಂದ ನೋಡಿದರೆ ಹಿಂದೆಂದೂ ಕಂಡಿರದಂತಹ ಪರಿಸ್ಥಿತಿಯಲ್ಲಿ ಈ ಬಾರಿ ಬಜೆಟ್ ಸಿದ್ಧಪಡಿಸಲಾಗಿದೆ. ಆದಾಗ್ಯೂ, 2020ರ ಕೊನೆವರೆಗೂ ನಾವು ಕೋವಿಡ್–19 ಸಾಂಕ್ರಾಮಿಕವನ್ನು ಎದುರಿಸಿದ್ದೇವೆ ಎಂದು ಬಜೆಟ್ ಮಂಡನೆಯ ಆರಂಭದಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದರು.

2020ರ ಮೇ ತಿಂಗಳಲ್ಲಿ ಸರ್ಕಾರವು ‘ಆತ್ಮನಿರ್ಭರ್ ಭಾರತ್’ ಪ್ಯಾಕೇಜ್ ಘೋಷಿಸಿತು. ಆರ್‌ಬಿಐ ಕೈಗೊಂಡಿರುವ ಕ್ರಮಗಳೂ ಸೇರಿ ಎಲ್ಲ ಹಣಕಾಸು ಕ್ರಮಗಳ ಮೊತ್ತ ಅಂದಾಜು ₹27.1 ಲಕ್ಷ ಕೋಟಿ ಆಗಿದೆ ಎಂದು ಸಚಿವೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.