ADVERTISEMENT

Union Budget 2021: ವಿಮಾ ವಲಯದಲ್ಲಿ ಶೇ 74ರಷ್ಟು ಎಫ್‌ಡಿಐಗೆ ಅವಕಾಶ

ಪಿಟಿಐ
Published 1 ಫೆಬ್ರುವರಿ 2021, 10:31 IST
Last Updated 1 ಫೆಬ್ರುವರಿ 2021, 10:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆ ಮಿತಿಯನ್ನು ಶೇ 74ಕ್ಕೆ ಹೆಚ್ಚಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

‘1938ರ ವಿಮಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಎಫ್‌ಡಿಐ ಮಿತಿಯನ್ನು ಶೇ 49 ರಿಂದ ಶೇ 74ಕ್ಕೆ ಹೆಚ್ಚಿಸಲು ಹಾಗೂ ಸುರಕ್ಷತೆಗಳೊಂದಿಗೆ ವಿದೇಶಿ ಮಾಲೀಕತ್ವಕ್ಕೆ ಮತ್ತು ನಿಯಂತ್ರಣಕ್ಕೆ ಅವಕಾಶ ನೀಡಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

‘ಹೊಸ ವ್ಯವಸ್ಥೆಯಲ್ಲಿ, ಆಡಳಿತ ಮಂಡಳಿಯ ಬಹುಪಾಲು ನಿರ್ದಶಕರು ಮತ್ತು ನಿರ್ವಹಣಾ ಸದಸ್ಯರು ಭಾರತೀಯ ನಿವಾಸಿಗಳಾಗಿರಲಿದ್ದು, ಶೇ 50ರಷ್ಟು ಸ್ವತಂತ್ರ ನಿರ್ದೇಶಕರು ಇರಬೇಕು. ನಿರ್ದಿಷ್ಟ ಪ್ರಮಾಣದ ಲಾಭವನ್ನು ಸಾಮಾನ್ಯ ಮೀಸಲು ಆಗಿ ಉಳಿಸಿಕೊಳ್ಳಲಾಗುವುದು’ ಎಂದು ವಿವರಿಸಿದ್ದಾರೆ.

ADVERTISEMENT

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.