ADVERTISEMENT

ಬೆಂಗಳೂರಿನಲ್ಲಿ ಅಮೆಜಾನ್ ಫುಡ್ ಡೆಲಿವರಿ ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 8:15 IST
Last Updated 11 ಮಾರ್ಚ್ 2021, 8:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಜನಪ್ರಿಯ ಆನ್‌ಲೈನ್ ತಾಣ ಅಮೆಜಾನ್ ಇಂಡಿಯಾವು ಬೆಂಗಳೂರಿನಲ್ಲಿ ತನ್ನ ಆಹಾರ ಡೆಲಿವರಿ ಸೇವೆಯಾಗಿರುವ ಅಮೆಜಾನ್ ಫುಡ್ಅನ್ನು ಪ್ರಾರಂಭಿಸಿದೆ.

ನಗರದ ವೈಟ್‌ಫೀಲ್ಡ್, ಎಚ್‌ಎಸ್‌ಆರ್ ಲೇಔಟ್, ಸರ್ಜಾಪುರ, ಕೋರಮಂಗಲ, ಇಂದಿರಾನಗರ, ಎಂಜಿ ರಸ್ತೆ, ಜಯನಗರ, ಜೆಪಿ ನಗರ, ಫ್ರೇಜರ್ ಟೌನ್, ಮಲ್ಲೇಶ್ವರಂ, ರಾಜಾಜಿ ನಗರ, ವಿಜಯನಗರ ಸೇರಿದಂತೆ ನಗರದಾದ್ಯಂತ 62 ಪಿನ್-ಕೋಡ್ ಪ್ರದೇಶಗಳಲ್ಲಿ ಅಮೆಜಾನ್ ಫುಡ್ ಲಭ್ಯವಿರುತ್ತದೆ. ಅತ್ಯಂತ ಜನಪ್ರಿಯ ಹಾಗೂ ಶುಚಿಯಾಗಿದೆ ಎಂದು ಸರ್ಟಿಫೈಡ್ ಹೊಂದಿರುವ ರೆಸ್ಟೋರೆಂಟ್‌ಗಳು ಮತ್ತು ಕ್ಲೌಡ್ ಕಿಚನ್‌ಗಳಿಂದ ತಮಗಿಷ್ಟವಾಗಿರುವ ತಿಂಡಿ-ತಿನಿಸುಗಳನ್ನು ಗ್ರಾಹಕರು ಆರ್ಡರ್ ಮಾಡಿ ಹೋಮ್ ಡೆಲಿವರಿ ಪಡೆಯಬಹುದಾಗಿದೆ.

ಪ್ರೈಮ್ ಸದಸ್ಯರು ತಮ್ಮ ಎಲ್ಲಾ ಆರ್ಡರ್‌ಗಳನ್ನು ಉಚಿತ ಡೆಲಿವರಿ ಪಡೆಯಬಹುದಾಗಿದೆ, ಇತರ ಗ್ರಾಹಕರು ಅಮೆಜಾನ್ ಫುಡ್‌ಗೆ ಆರ್ಡರ್ ಮಾಡಿದಾಗ ಕನಿಷ್ಠ ಡೆಲಿವರಿ ಶುಲ್ಕ ರೂ 19 ಪಾವತಿ ಮಾಡಬೇಕಾಗುತ್ತದೆ. ಆದರೆ, ಸೀಮಿತ ಅವಧಿಯ ಅಂಗವಾಗಿ, ಎಲ್ಲಾ ಗ್ರಾಹಕರಿಗೂ ಪ್ಯಾಕೇಜಿಂಗ್ ಶುಲ್ಕ ಮನ್ನಾ ಮಾಡಲಾಗಿದೆ. ಗ್ರಾಹಕರು ರೆಸ್ಟೋರೆಂಟ್‌ಗಳಿಂದ ಆಕರ್ಷಕ ಕೊಡುಗೆಗಳು ಮತ್ತು ಅಮೆಜಾನ್ ಪೇ ಕ್ಯಾಶ್‌ಬ್ಯಾಕ್‌ಗಳನ್ನು ಪಡೆಯಬಹುದಾಗಿದೆ.

ADVERTISEMENT

ಬೆಂಗಳೂರಿನಲ್ಲಿರುವ ಗ್ರಾಹಕರು ಕಟ್ಟುನಿಟ್ಟಾದ ಸುರಕ್ಷಾ ಪದ್ಧತಿಗಳನ್ನು ಪಾಲಿಸುತ್ತಿರುವ 2500 ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು ಮತ್ತು ಕ್ಲೌಡ್ ಕಿಚನ್‌ಗಳಿಂದ ಇಂಡಿಯನ್, ಚೈನೀಸ್, ಇಟಾಲಿಯನ್, ಬಿರಿಯಾನಿ, ಬರ್ಗರ್‌ಗಳು ಮತ್ತು ಡೆಸ್ಸರ್ಟ್ಸ್ ಎಂಬಂತೆ ವಿಭಿನ್ನ ಪ್ರಕಾರದ ತಿಂಡಿ-ತಿನಿಸುಗಳನ್ನು ಆರ್ಡರ್ ಮಾಡಬಹುದಾಗಿದೆ. ಅಮೆಜಾನ್ ಫುಡ್ ಪ್ರತಿದಿನ ಬೆಳಿಗ್ಗೆ 7 ರಿಂದ ರಾತ್ರಿ 11 ಗಂಟೆ ವರೆಗೆ ಆರ್ಡರ್ ತೆಗೆದುಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.