ADVERTISEMENT

ಚೀನಾದಲ್ಲಿ 29 ಆ್ಯಪಲ್‌ ಮಳಿಗೆ ಪುನರಾರಂಭ: ಸೀಮಿತ ಅವಧಿ ಕಾರ್ಯ, ಬಿಡದ ಕೊರೊನಾ ಭಯ

ಏಜೆನ್ಸೀಸ್
Published 25 ಫೆಬ್ರುವರಿ 2020, 7:22 IST
Last Updated 25 ಫೆಬ್ರುವರಿ 2020, 7:22 IST
   
""

ಬೀಜಿಂಗ್‌: ಚೀನಾದಲ್ಲಿ ಸೋಮವಾರ ಆ್ಯಪಲ್‌ ಮಳಿಗೆಗಳು ಸೀಮಿತ ಅವಧಿ ಕಾರ್ಯಾಚರಿಸಿವೆ. ಒಟ್ಟು 42 ಮಳಿಗೆಗಳ ಪೈಕಿ 29 ಮಾತ್ರ ತೆರೆಯಲಾಗಿದೆಎಂದು ಆ್ಯಪಲ್‌ ಕಂಪನಿಯ ಚೀನಾ ವೆಬ್‌ಸೈಟ್‌ ತಿಳಿಸಿದೆ.

ಕೊರೊನಾ ವೈರಸ್‌ ಆತಂಕದಲ್ಲಿ ಚೀನಾದಲ್ಲಿ ಬಹುತೇಕ ವಹಿವಾಟುಗಳು ಸ್ಥಗಿತಗೊಂಡಿವೆ. ಆ್ಯಪಲ್‌ ಕಂಪನಿ ಅಧಿಕೃತ ಮಳಿಗೆಗಳೂ ಸಹ ಫೆಬ್ರುವರಿ 1ರಿಂದ ಚೀನಾದಲ್ಲಿನ ಎಲ್ಲ 42 ಮಳಿಗೆಗಳನ್ನು ಮುಚ್ಚಿತ್ತು. ಸೋಮವಾರವಷ್ಟೇ ಕೆಲವು ಮಳಿಗೆಗಳು ಬೆಳಿಗ್ಗೆ 11ರಿಂದ ಸಂಜೆ 6:30ರ ವರೆಗೂ ಕಾರ್ಯಾಚರಿಸಿವೆ.

ಚೀನಾದಾದ್ಯಂತ ಕೊರೊನಾ ವೈರಸ್‌ ವ್ಯಾಪಿಸುತ್ತಿರುವ ಆತಂಕ ಎದುರಾಗಿ ಆ್ಯಪಲ್‌ ತನ್ನ ಎಲ್ಲ ರಿಟೇಲ್‌ ಮಳಿಗೆಗಳು, ಕಾರ್ಪೊರೇಟ್‌ ಕಚೇರಿಗಳು ಹಾಗೂ ಸಂಪರ್ಕ ಕೇಂದ್ರಗಳನ್ನು ಮುಚ್ಚಿದೆ. ಜಾಗತಿಕ ಮಟ್ಟದಲ್ಲಿ ಆ್ಯಪಲ್‌ ಐಫೋನ್‌ ಮಾರಾಟ ಮತ್ತು ಪೂರೈಕೆಯ ಮೇಲೂ ಕೊರೊನಾ ಪರಿಣಾಮ ಬೀರಿದ್ದು, ಜನವರಿ–ಮಾರ್ಚ್‌ ತ್ರೈಮಾಸಿಕದಲ್ಲಿ ಆದಾಯ ಗುರಿ ತಲುಪುವುದು ಸಾಧ್ಯವಾಗುವುದಿಲ್ಲ ಎಂದು ಕಂಪನಿ ಹೇಳಿದೆ.

ADVERTISEMENT

ಹುಬೆ ಪ್ರಾಂತ್ಯದ ಹೊರ ಭಾಗದಲ್ಲಿರುವ ಐಫೋನ್‌ ತಯಾರಿಕಾ ಘಟಕಗಳು ಮತ್ತೆ ಕಾರ್ಯಾರಂಭಿಸಿದ್ದು, ತಯಾರಿಕೆ ನಿಧಾನ ಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ. ಕಾರ್ಫೊರೇಟ್‌ ಕಚೇರಿ ಹಾಗೂ ಸಂಪರ್ಕ ಕೇಂದ್ರಗಳನ್ನೂ ತೆರೆಯಲಾಗುತ್ತಿದೆ. ಆನ್‌ಲೈನ್‌ ಸ್ಟೋರ್‌ಗಳಲ್ಲಿ ಖರೀದಿ ಸಾಧ್ಯವಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.