ADVERTISEMENT

ಸರ್ಕಾರದ ಪರಿಹಾರ ಪ್ಯಾಕೇಜ್, ಬಾಕಿ ಪಾವತಿಗೆ ಗಡುವು; ಟೆಲಿಕಾಂ ಕಂಪನಿಗಳು ನಿರಾಳ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಸೆಪ್ಟೆಂಬರ್ 2021, 16:47 IST
Last Updated 15 ಸೆಪ್ಟೆಂಬರ್ 2021, 16:47 IST
ದೂರಸಂಪರ್ಕ ಕ್ಷೇತ್ರ–ಪ್ರಾತಿನಿಧಿಕ ಚಿತ್ರ
ದೂರಸಂಪರ್ಕ ಕ್ಷೇತ್ರ–ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿರುವ ದೂರಸಂಪರ್ಕ ಕ್ಷೇತ್ರದ ಕಂಪನಿಗಳಿಗೆ ಕೇಂದ್ರ ಸಚಿವ ಸಂಪುಟದ ನಿರ್ಧಾರ ನಿರಾಳ ತರಬಹುದಾಗಿದೆ. ಟೆಲಿಕಾಂ ಕಂಪನಿಗಳಿಗೆ ಪರಿಹಾರ ಪ್ಯಾಕೇಜ್‌ ಘೋಷಣೆಯ ಸಂಬಂಧ ಕೇಂದ್ರ ಸಚಿವ ಸಂಪುಟದ ಅನುಮೋದನೆ ದೊರೆತಿರುವುದಾಗಿ ವರದಿಯಾಗಿದೆ.

ಹೊಂದಾಣಿಕೆ ಮಾಡಿದ ಒಟ್ಟು ಆದಾಯ (ಎಜಿಆರ್‌) ರೂಪದಲ್ಲಿ ಸರ್ಕಾರಕ್ಕೆ ಟೆಲಿಕಾಂ ಕಂಪನಿಗಳು ಸಾವಿರಾರು ಕೋಟಿ ರೂಪಾಯಿ ಪಾವತಿ ಬಾಕಿ ಉಳಿಸಿಕೊಂಡಿವೆ. ದೂರಸಂಪರ್ಕ ಕ್ಷೇತ್ರದ ಸುಧಾರಣೆಗಾಗಿ ಬಾಕಿ ಮೊತ್ತ ಪಾವತಿಯಿಂದ ತಾತ್ಕಾಲಿಕ ಬಿಡುವು (ಮರುಪಾವತಿಗೆ ಗಡುವು), ಎಜಿಆರ್‌ ವ್ಯಾಖ್ಯಾನದ ಮರುಪರಿಶೀಲನೆ ಹಾಗೂ ತರಂಗಾಂತರ ಬಳಕೆ ಶುಲ್ಕದಲ್ಲಿ ಕಡಿತ ಮಾಡುವಂತಹ ಕ್ರಮಗಳನ್ನು ಕೈಗೊಳ್ಳುವ ಪ್ರಸ್ತಾಪ ಸಲ್ಲಿಕೆಯಾಗಿತ್ತು.

ದೂರಸಂಪರ್ಕ ಸಚಿವ ಅಶ್ವಿನಿವೈಷ್ಣವ್‌ ಅವರು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ವಿವರಿಸುತ್ತಿದ್ದಾರೆ.

ADVERTISEMENT

ವೊಡಾಫೋನ್‌ ಐಡಿಯಾ ಲಿಮಿಟೆಡ್‌(ವಿಐಎಲ್‌) ಸರ್ಕಾರಕ್ಕೆ ₹ 50,399 ಕೋಟಿ ಪಾವತಿಸುವುದು ಬಾಕಿ ಇದೆ. ಸರ್ಕಾರದ ಪರಿಹಾರ ಪ್ಯಾಕೇಜ್‌ ವಿಐಎಲ್‌ ಸೇರಿದಂತೆ ಮೂರು ಖಾಸಗಿ ಕಂಪನಿಗಳಿಗೆ ಚೇತರಿಕೆ ನೀಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.