ADVERTISEMENT

2021ರಲ್ಲಿ ಒಂದು ಲಕ್ಷ ಜನರಿಗೆ ಉದ್ಯೋಗ: ಕಾಗ್ನಿಜಂಟ್‌

ಪಿಟಿಐ
Published 29 ಜುಲೈ 2021, 16:59 IST
Last Updated 29 ಜುಲೈ 2021, 16:59 IST
ಕಾಗ್ನಿಜಂಟ್‌ ಕಂಪನಿ–ಸಾಂದರ್ಭಿಕ ಚಿತ್ರ
ಕಾಗ್ನಿಜಂಟ್‌ ಕಂಪನಿ–ಸಾಂದರ್ಭಿಕ ಚಿತ್ರ   

ನವದೆಹಲಿ: ಅಮೆರಿಕ ಮೂಲದ ಐಟಿ ಕಂಪನಿ ಕಾಗ್ನಿಜಂಟ್‌ ಈ ವರ್ಷ ಒಂದು ಲಕ್ಷ ಜನರಿಗೆ ಉದ್ಯೋಗ ನೀಡುವ ನಿರೀಕ್ಷೆ ಇರುವುದಾಗಿ ತಿಳಿಸಿದೆ. ಜೂನ್‌ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯ ಶೇ.41.8ರಷ್ಟು ಹೆಚ್ಚಳವಾಗಿ 512 ಮಿಲಿಯನ್‌ ಡಾಲರ್‌ (ಸುಮಾರು ₹ 3,801.7 ಕೋಟಿ ) ಆಗಿರುವುದಾಗಿ ಪ್ರಕಟಿಸಿದೆ.

ಕಾಗ್ನಿಜಂಟ್‌ ಭಾರತದಲ್ಲಿ ಸುಮಾರು 2 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಕಂಪನಿಯ ಐಟಿ ಸೇವೆಗಳು ಮತ್ತು ಬಿಪಿಒದಲ್ಲಿ ಟ್ರೈನಿಗಳನ್ನೂ ಒಳಗೊಂಡಂತೆ ಜೂನ್‌ ತ್ರೈಮಾಸಿಕದ ಅಂತ್ಯಕ್ಕೆ 3 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ.

2021ರಲ್ಲಿ ಅಂದಾಜು 1,00,000 ಜನರನ್ನು ಆಯ್ಕೆ ಮಾಡಲು ಹಾಗೂ 1 ಲಕ್ಷ ಜನರಿಗೆ ತರಬೇತಿ ನೀಡಲು ನಿರ್ಧರಿಸಿರುವುದಾಗಿ ಕಂಪನಿಯ ಸಿಇಒ ಬ್ರಯಾನ್‌ ಹಮ್‌ಫ್ರೀಜ್‌ ಹೇಳಿದ್ದಾರೆ.

ADVERTISEMENT

ಇದರೊಂದಿಗೆ, 2021ರಲ್ಲಿ ಸುಮಾರು 30,000 ಹೊಸ ಪದವೀಧರರನ್ನು ಕಾಗ್ನಿಜಂಟ್‌ ಆಯ್ಕೆ ಮಾಡಿಕೊಳ್ಳಲಿದೆ ಹಾಗೂ ದೇಶದಲ್ಲಿ ಮುಂದಿನ ವರ್ಷಕ್ಕೆ 45,000 ಹೊಸ ಪದವೀಧರರಿಗೆ ಉದ್ಯೋಗ ನೀಡಲು ಯೋಜನೆ ರೂಪಿಸಿದೆ. ಪ್ರಮುಖವಾಗಿ ಜೂನಿಯರ್‌ ಹಂತದ ಉದ್ಯೋಗಗಳಿಗೆ ಅಥವಾ ಮಧ್ಯಮ ಶ್ರೇಣಿಯ ಸ್ಥಾನಗಳಿಗಾಗಿ ಭಾರತದಲ್ಲಿ ಆಯ್ಕೆ ನಡೆಯಲಿದೆ.

2019ರಿಂದ ಕಂಪನಿಯು ಡಿಜಿಟಲ್‌ ವಲಯದ ಸಾಮರ್ಥ್ಯ ಹೆಚ್ಚಳಕ್ಕಾಗಿ ವಿಲೀನ ಮತ್ತು ಸ್ವಾಧೀನ ಪ್ರಕ್ರಿಯೆಗಳಿಗಾಗಿ 2 ಬಿಲಿಯನ್‌ ಡಾಲರ್‌ಗಳಿಗೂ ಹೆಚ್ಚಿನ ಹೂಡಿಕೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.