ADVERTISEMENT

Big Billion Day: ವಾರ್ಷಿಕ ವಿಶೇಷ ಮಾರಾಟ ದಿನಾಂಕ ಘೋಷಿಸಿದ ಫ್ಲಿಪ್‌ಕಾರ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಸೆಪ್ಟೆಂಬರ್ 2021, 5:35 IST
Last Updated 22 ಸೆಪ್ಟೆಂಬರ್ 2021, 5:35 IST
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ದಿನಾಂಕ ಪ್ರಕಟ
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ದಿನಾಂಕ ಪ್ರಕಟ   

ಬೆಂಗಳೂರು: ದೇಶದ ಪ್ರಮುಖ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್, ‘ಬಿಗ್ ಬಿಲಿಯನ್ ಡೇ 2021’ ವಾರ್ಷಿಕ ವಿಶೇಷ ಆಫರ್ ಸೇಲ್ ದಿನಾಂಕ ಪ್ರಕಟಿಸಿದೆ.

ಅಕ್ಟೋಬರ್ 7 ರಿಂದ ಆರಂಭವಾಗುವ ಬಿಗ್ ಬಿಲಿಯನ್ ಡೇ, 12ನೇ ತಾರೀಕಿನವರೆಗೆ ಒಟ್ಟು ಆರು ದಿನಗಳ ಕಾಲ ವಿಶೇಷ ಸೇಲ್ ನಡೆಯಲಿದೆ.

ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯತ್ವ ಹೊಂದಿರುವವರಿಗೆ ಸೇಲ್ ಮೊದಲೇ ಆರಂಭವಾದರೆ, ಪ್ಲಸ್ ಸದಸ್ಯತ್ವ ಇಲ್ಲದವರು ಸೂಪರ್‌ಕಾಯಿನ್ ಬಳಸಿ, ಅದರ ಮೂಲಕ ಆಫರ್ ಸೇಲ್ ಪ್ರಯೋಜನ ಪಡೆಯಬಹುದು.

ADVERTISEMENT

ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಶೇ. 10 ರಿಯಾಯಿತಿ, ಪೇಟಿಎಂ ಕ್ಯಾಶ್‌ಬ್ಯಾಕ್ ಕೊಡುಗೆ ಕೂಡ ಲಭ್ಯವಾಗಲಿದೆ.

ಬಿಗ್ ಬಿಲಿಯನ್ ಡೇ ಸೇಲ್ ಸಂದರ್ಭದಲ್ಲಿ ವಿವಿಧ ಹೊಸ ಉತ್ಪನ್ನಗಳ ಬಿಡುಗಡೆಯೂ ನಡೆಯಲಿದೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.