ADVERTISEMENT

ಚಿನ್ನದ ಬೆಲೆ ಕುಸಿತ: 10 ಗ್ರಾಂಗೆ ₹ 1,130ರಷ್ಟು ಇಳಿಕೆ

ಪಿಟಿಐ
Published 17 ಸೆಪ್ಟೆಂಬರ್ 2021, 19:41 IST
Last Updated 17 ಸೆಪ್ಟೆಂಬರ್ 2021, 19:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು ಶುಕ್ರವಾರ ಪ್ರತಿ 10 ಗ್ರಾಂಗೆ ₹ 1,130ರಷ್ಟು ಇಳಿಕೆ ಆಗಿದೆ. 10 ಗ್ರಾಂ ಚಿನ್ನವು ₹ 45,207ರಂತೆ ಮಾರಾಟ ಆಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗಿರುವ ಬೆಲೆ ಇಳಿಕೆಯು ದೇಶಿ ಮಾರುಕಟ್ಟೆಯಲ್ಲಿಯೂ ಪ್ರತಿಫಲಿಸಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹೇಳಿದೆ. ಗುರುವಾರದ ವಹಿವಾಟಿನ ಕೊನೆಯಲ್ಲಿ ಚಿನ್ನದ ಬೆಲೆಯು ₹ 46,337 ಆಗಿತ್ತು.

ಶುಕ್ರವಾರ ಬೆಳ್ಳಿಯ ಬೆಲೆಯು ಕೆ.ಜಿ.ಗೆ ₹ 708ರಷ್ಟು ಇಳಿಕೆ ಕಂಡಿದೆ. ಕೆ.ಜಿ. ಬೆಳ್ಳಿಯು ₹ 60,183ರಂತೆ ಮಾರಾಟ ಆಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.