ADVERTISEMENT

ಗೂಗಲ್‌ ಪೇ ನಿಯಮ ಉಲ್ಲಂಘಿಸಿಲ್ಲ: ಆರ್‌ಬಿಐ

ಪಿಟಿಐ
Published 20 ಜೂನ್ 2020, 16:00 IST
Last Updated 20 ಜೂನ್ 2020, 16:00 IST
ಗೂಗಲ್‌ ಪೇ
ಗೂಗಲ್‌ ಪೇ   

ನವದೆಹಲಿ: ಗೂಗಲ್‌ ಪೇ ಒಂದು ಥರ್ಡ್‌ ಪಾರ್ಟಿ ಆ್ಯಪ್‌ ಪ್ರೊವೈಡರ್ (ಟಿಪಿಎಆರ್‌) ಆಗಿದ್ದು, ಯಾವುದೇ ರೀತಿಯ ಪಾವತಿ ವ್ಯವಸ್ಥೆಯನ್ನು ನಿರ್ವಹಿಸುತ್ತಿಲ್ಲ ಎಂದು ಭಾರತೀಯ ರಿಸರ್ವ್‌‌ ಬ್ಯಾಂಕ್‌ (ಆರ್‌ಬಿಐ) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

2007ರಪೇಮೆಂಟ್‌ ಆ್ಯಂಡ್‌ ಸೆಟಲ್‌ಮೆಂಟ್‌ ಸಿಸ್ಟಂ ಕಾಯ್ದೆಯನ್ನು ಉಲ್ಲಂಘಿಸಿ,ಆರ್‌ಬಿಐನಿಂದ ಅನುಮತಿಯನ್ನೂ ಪಡೆಯದೆ ಪಾವತಿ ವ್ಯವಸ್ಥೆಯನ್ನು ನೀಡುತ್ತಿದೆಎಂದು ಆರ್ಥಿಕ ತಜ್ಞ ಅಭಿಜಿತ್‌ ಮಿಶ್ರಾ ಎನ್ನುವವರು ಗೂಗಲ್‌ ಪೇ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಕುರಿತು ಕೋರ್ಟ್‌ಗೆ ಪ್ರತಿಕ್ರಿಯೆ ನೀಡಿದ ಆರ್‌ಬಿಐ, ಕಾಯ್ದೆಯ ಉಲ್ಲಂಘನೆ ಆಗಿಲ್ಲ. ಗೂಗಲ್‌ ಪೇ ಯಾವುದೇ ರೀತಿಯ ಪಾವತಿ ವ್ಯವಸ್ಥೆಯನ್ನು ನಿರ್ವಹಿಸುತ್ತಿಲ್ಲ.ಹೀಗಾಗಿ, 2019ರ ಮಾರ್ಚ್‌ 20ರಂದುರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಬಿಡುಗಡೆ ಮಾಡಿರುವ ‌ಪಾವತಿ ವ್ಯವಸ್ಥೆಗಳನ್ನು ನಿರ್ವಹಿಸುತ್ತಿರುವವರ ಪಟ್ಟಿಯಲ್ಲಿ ಗೂಗಲ್‌ ಪೇ ಇಲ್ಲ ಎಂದೂ ನ್ಯಾಯಪೀಠಕ್ಕೆ ಹೇಳಿದೆ.

ADVERTISEMENT

ಈ ವಿಷಯವು ಇತರೆ ಥರ್ಡ್‌ ಪಾರ್ಟಿ ಆ್ಯಪ್‌ಗಳ ಮೇಲೆಯೂ ಪರಿಣಾಮ ಬೀರುವಂತಹದ್ದಾಗಿದ್ದು, ವಿಷಯದ ಕುರಿತಾಗಿ ಸುದೀರ್ಘವಾದ ವಿಚಾರಣೆಯ ಅಗತ್ಯವಿದೆ ಎಂದು ನ್ಯಾಯಪೀಠವು ಅಭಿಪ‍್ರಾಯಪಟ್ಟಿದ್ದು, ಮುಂದಿನ ವಿಚಾರಣೆಯನ್ನು ಜುಲೈ 22ಕ್ಕೆ ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.