ADVERTISEMENT

ಗೂಗಲ್ ಪ್ಲೇ ಸ್ಟೋರ್‌ನಿಂದ 8 ನಕಲಿ ಕ್ರಿಪ್ಟೋಕರೆನ್ಸಿ ಆಂಡ್ರಾಯ್ಡ್ ಆ್ಯಪ್‌ಗಳು ಔಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಆಗಸ್ಟ್ 2021, 8:02 IST
Last Updated 23 ಆಗಸ್ಟ್ 2021, 8:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿನ 8 ನಕಲಿ ಕ್ರಿಪ್ಟೋಕರೆನ್ಸಿ ಆ್ಯಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ.

ಈ ಆ್ಯಪ್‌ಗಳ ಮೂಲಕ ಗ್ರಾಹಕರು ಕ್ರಿಪ್ಟೋ ಕರೆನ್ಸಿಯ ಬಳಕೆಯನ್ನು ಉಚಿತವಾಗಿ ಮಾಡಬಹುದೆಂದು ವಿವರಣೆ ಇರುತ್ತದೆ. ಆದರೆ, ಇವುಗಳನ್ನು ತೆರೆದ ನಂತರ 'ಹೆಚ್ಚಿನ ಬಳಕೆಯ ಸಾಮಾರ್ಥ್ಯ ಹೊಂದಲು ಗ್ರಾಹಕರು ಹಣ ಪಾವತಿಸಬೇಕು' ಎಂದು ಕೇಳಲಾಗುತ್ತದೆ. ವಾಸ್ತವದಲ್ಲಿ ಈ ಆ್ಯಪ್‌ಗಳು ಕಾರ್ಯವನ್ನೇ ನಿರ್ವಹಿಸುವುದಿಲ್ಲ ಎಂದು ಟ್ರೆಂಡ್ ಮೈಕ್ರೊದ ಭದ್ರತಾ ಸಂಶೋಧಕರು ತಿಳಿಸಿದ್ದಾರೆ.

ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾದ ಎಂಟು ನಕಲಿ ಆ್ಯಪ್‌ಗಳು

1) ಬಿಟ್‌ಫಂಡ್‌ಗಳು - ಕ್ರಿಪ್ಟೋ ಕ್ಲೌಡ್ ಮೈನಿಂಗ್
2) ಬಿಟ್‌ಕಾಯಿನ್ ಮೈನರ್ - ಕ್ಲೌಡ್ ಮೈನಿಂಗ್
3) ಬಿಟ್‌ಕಾಯಿನ್ (ಬಿಟಿಸಿ) - ಪೂಲ್ ಮೈನಿಂಗ್ ಕ್ಲೌಡ್ ವ್ಯಾಲೆಟ್‌
4) ಕ್ರಿಪ್ಟೋ ಹೋಲಿಕ್ - ಬಿಟ್‌ಕಾಯಿನ್ ಕ್ಲೌಡ್ ಮೈನಿಂಗ್
5) ಡೈಲಿ ಬಿಟ್‌ಕಾಯಿನ್ ರಿವಾರ್ಡ್ಸ್‌ - ಕ್ಲೌಡ್ ಬೆಸ್ಡ್‌ ಮೈನಿಂಗ್‌ ಸಿಸ್ಟಮ್‌
6) ಬಿಟ್‌ಕಾಯಿನ್ 2021
7) ಮೈನ್‌ಬಿಟ್‌ ಪ್ರೊ - ಕ್ರಿಪ್ಟೋ ಕ್ಲೌಡ್ ಮೈನಿಂಗ್ & ಬಿಟಿಸಿ ಮೈನರ್ಸ್
8) ಎಥಿರಿಯಮ್(ಇಟಿಎಚ್‌)- ಪೂಲ್ ಮೈನಿಂಗ್ ಕ್ಲೌಡ್

ADVERTISEMENT

ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಆ್ಯಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಇವೆ ಎಂದು ಟ್ರೆಂಡ್ ಮೈಕ್ರೊ ಹೇಳಿದೆ. ಆಂಡ್ರಾಯ್ಡ್ ಫೋನ್ ಬಳಕೆದಾರರು ಇಂತಹ ನಕಲಿ ಕ್ರಿಪ್ಟೋಕರೆನ್ಸಿ ಆ್ಯಪ್‌ಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಸಂಸ್ಥೆಯು ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.