ADVERTISEMENT

ಅ. 4ರಿಂದ ಅಮೆಜಾನ್‌ ಮಾರಾಟ ಮೇಳ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 16:48 IST
Last Updated 24 ಸೆಪ್ಟೆಂಬರ್ 2021, 16:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅಮೆಜಾನ್‌ ಕಂಪನಿ ಪ್ರತಿ ವರ್ಷ ಆಯೋಜಿಸುವ ‘ಗ್ರೇಟ್ ಇಂಡಿಯನ್ ಫೆಸ್ಟಿವಲ್’ ಮಾರಾಟ ಮೇಳವು ಈ ಬಾರಿ ಅಕ್ಟೋಬರ್ 4ರಿಂದ ಶುರುವಾಗಲಿದೆ. ಒಂದು ತಿಂಗಳ ಅವಧಿಗೆ ಇದು ನಡೆಯಲಿದೆ.

ಶುಕ್ರವಾರ ವರ್ಚುವಲ್ ವೇದಿಕೆಯ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆಜಾನ್ ಇಂಡಿಯಾದ ಉಪಾಧ್ಯಕ್ಷ ಮನೀಷ್ ತಿವಾರಿ, ‘ಈ ಬಾರಿಯ ಹಬ್ಬದ ಮಾರಾಟ ಮೇಳದಲ್ಲಿ 75 ಸಾವಿರ ಸ್ಥಳೀಯ, ಸಣ್ಣ ವ್ಯಾಪಾರಿಗಳು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು. ಒಟ್ಟು 8.50 ಲಕ್ಷ ಮಾರಾಟಗಾರರು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈಗಿರುವ ಅಂಕಿ–ಅಂಶದ ಪ್ರಕಾರ ಅಮೆಜಾನ್ ಮೂಲಕ ವಸ್ತುಗಳನ್ನು ಖರೀದಿಸುತ್ತಿರುವ ಗ್ರಾಹಕರ ಪೈಕಿ ಶೇಕಡ 60ರಿಂದ ಶೇ 65ರಷ್ಟು ಜನ ಎರಡನೆಯ ಹಾಗೂ ಅದಕ್ಕಿಂತ ಕೆಳಹಂತಗಳ ನಗರ, ಪಟ್ಟಣಗಳಿಗೆ ಸೇರಿದವರು ಎಂದು ತಿವಾರಿ ಹೇಳಿದರು.

ADVERTISEMENT

ಫ್ಲಿಪ್‌ಕಾರ್ಟ್‌ನಿಂದ ಮೇಳ: ಬಿಗ್‌ ಬಿಲಿಯನ್‌ ಡೇಸ್‌ ಮಾರಾಟ ಮೇಳವು ಅಕ್ಟೋಬರ್ 7ರಿಂದ 12ರವರೆಗೆ ನಡೆಯಲಿದೆ ಎಂದು ಫ್ಲಿಪ್‌ಕಾರ್ಟ್‌ ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. 3.75 ಲಕ್ಷಕ್ಕಿಂತ ಹೆಚ್ಚಿನ ಮಾರಾಟಗಾರರು ಈ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಫ್ಲಿಪ್‌ಕಾರ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.